• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಎಸ್ ಗೆ ಚೇತರಿಕೆಗೆ ನೀಡಿದ ನಮ್ಮ ಕಂಪೆನಿಗಳು !

By Mahesh
|

ನ್ಯೂಯಾರ್ಕ್, ನ.17: ಈ ದಶಕ ಕಂಡ ಭಾರೀ ಆರ್ಥಿಕ ಕುಸಿತದಿಂದ ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕಾ ತೀವ್ರವಾದ ಹೊಡೆತ ತಿಂದಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನೂರಾರು ಬ್ಯಾಂಕ್ ಗಳು ರಾತ್ರೋರಾತ್ರಿ ಬಾಗಿಲು ಮುಚ್ಚಿವೆ. ಅಮೇರಿಕಾದ ಆರ್ಥಿಕತೆ ಇದೀಗ ಚೇತರಿಕೆ ಕಾಣುತ್ತಿದೆ. ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಾದ ಉದ್ಯೋಗ ಮಾರುಕಟ್ಟೆ ಏರಿಕೆಗೆ ಶತ ಪ್ರಯತ್ನವನ್ನೇ ನಡೆಸಿದ್ದಾರೆ.

ಎಚ್ 1 ಬಿ ವೀಸಾ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸುವ ಮೂಲಕ ವಿದೇಶೀ ತಂತ್ರಜ್ಞರಿಗೆ ಅಮೆರಿಕಾದ ಕೆಲಸಗಳನ್ನು ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದ ತಜ್ಞರಿಗೆ ಹಿನ್ನಡೆಯೂ ಆಗಿದೆ. ಆದರೆ ಭಾರತದ ಆರ್ಥಿಕತೆ ಶೀಘ್ರವಾಗಿ ಚೇತರಿಕೆ ಕಂಡಿದ್ದು ಬೆಳವಣಿಗೆಯತ್ತ ದಾಪುಗಾಲಿಡುತ್ತ ಸಾಗಿದೆ.

ಕಳೆದೊಂದು ದಶಕದಲ್ಲಿ ದೇಶದ ಹೂಡಿಕೆ ಬಂಡವಾಳ ವಾರ್ಷಿಕ ಶೇ.53 ರಷ್ಟು ಬೆಳವಣಿಗೆ ದಾಖಲಿಸಿದ್ದು 2009ರಲ್ಲಿ ಹೂಡಿಕೆ ಬಂಡವಾಳ 4.4 ಬಿಲಿಯನ್ ಡಾಲರ್ ಗಳಾಗಿದೆ ಎಂದು ತಜ್ಞರು ಹೇಳಿದ್ದಾರೆ. ದೇಶದಲ್ಲಿ ಹರಿದು ಬರುತ್ತಿರುವ ಬಂಡವಾಳದ ಹಿನ್ನೆಲೆಯಿಂದ ಅಮೇರಿಕಾಕ್ಕೂ ಲಾಭವಾಗಿದೆ. ದಿವಾಳಿಯಂಚಿನಲ್ಲಿದ್ದ ಅನೇಕ ಕಂಪೆನಿಗಳನ್ನು ಖರೀದಿಸಿ ಹಾಗೂ ಹೂಡಿಕೆ ಮಾಡುವ ಮೂಲಕ ಅಲ್ಲಿನ ಸಹಸ್ರಾರು ಉದ್ಯೋಗಗಳನ್ನು ಭಾರತೀಯ ಕಂಪೆನಿಗಳು ಉಳಿಸಿಕೊಟ್ಟಿವೆ.

ಬರಾಕ್ ಒಬಾಮರ ಇತ್ತೀಚಿನ ಭಾರತ ಹಾಗೂ ಏಷ್ಯಾ ಪ್ರವಾಸವೂ ಕೂಡ ಅಮೇರಿಕಾದ ಆರ್ಥಿಕತೆಗೆ ಚೇತರಿಕೆ ನೀಡುವ ಗುರಿಯನ್ನೇ ಪ್ರಮುಖವಾಗಿಸಿದೆ. ದೇಶದ ಭೇಟಿಯ ಸಂದರ್ಭದಲ್ಲಿ ಮಾಡಿಕೊಳ್ಳಲಾದ ದ್ವಿಪಕ್ಷೀಯ ಒಪ್ಪಂದಗಳಿಂದ ಅಮೇರಿಕಾದಲ್ಲಿ 50,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಆದರೆ ಒಬಾಮರ ಭೇಟಿಗೂ ಮೊದಲೇ ಅಮೇರಿಕಾದ ಆರ್ಥಿಕ ಚೇತರಿಕೆಗೆ ಸಹಾಯವಾದ ದೇಶದ ಪ್ರಮುಖ 5 ಕಂಪೆನಿಗಳ ಹೂಡಿಕೆಯ ಕುರಿತು ಮಾಹಿತಿ ಇಲ್ಲಿದೆ.

ಎಸ್ಸಾರ್ ಸಮೂಹ : ದೇಶದ ಉಕ್ಕು , ಶಿಪ್ಪಿಂಗ್ ಹಾಗೂ ತೈಲ ಉದ್ಯಮದ ಬೃಹತ್ ಕಂಪೆನಿಯಾಗಿರುವ ಎಸ್ಸಾರ್ ಸಮೂಹ ಅಮೇರಿಕಾದ ಮಿನ್ನೆಸೋಟ ಸ್ಟೀಲ್ ಇಂಡಸ್ಟ್ರೀಸ್ ನ್ನು 1.6 ಬಿಲಿಯನ್ ಡಾಲರ್ ನೀಡಿ ಖರೀದಿಸಿದೆ. ಇದು ಅಲ್ಲಿನ 12 ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ್ದು ಒಟ್ಟು 7,200ಕ್ಕೂ ಅಧಿಕ ನೌಕರರಿಗೆ ಉದ್ಯೋಗ ನೀಡಿದ್ದು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದವರಿಗೆ ಅಭಯ ನೀಡಿದಂತಾಗಿದೆ .

ಟಾಟಾ ಸಮೂಹ : ದೇಶದ ಅತೀ ದೊಡ್ಡ ಕೈಗಾರಿಕಾ ಸಮೂಹವಾಗಿರುವ ಟಾಟಾ ಹಿಂಜರಿತದ ಸಮಯದಲ್ಲಿ ಅಮೇರಿಕಾದಲ್ಲಿ 3 ಬಿಲಿಯನ್ ಡಾಲರ್ ಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದು ಅಲ್ಲಿ ಒಟ್ಟು 19,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.

ಜುಬಿಲೆಂಟ್ ಆರ್ಗ್ಯಾನೋಸಿಸ್: ಜುಬಿಲೆಂಟ್ ಕಂಪೆನಿ 2009ರಲ್ಲಿ ಅಮೇರಿಕಾದಲ್ಲಿ 246ಮಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿದ್ದು, ಅಲ್ಲಿ 900 ನೌಕರರಿಗೆ ಕೆಲಸ ಒದಗಿಸಿದೆ.

ವೊಕಾರ್ಡ್ ಸಮೂಹ: ದೇಶದ ಪ್ರಮುಖ ಔಷಧಿ ತಯಾರಿಕಾ ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿರುವ ಕಂಪೆನಿಯಾಗಿರುವ ವೊಕಾರ್ಡ್ ಅಮೇರಿಕಾದ ಮಾರ್ಟನ್ ಗ್ರೋವ್ ಔಷಧ ಕಂಪೆನಿಯನ್ನು 37 ಮಿಲಿಯ ಡಾಲರ್ ನೀಡಿ ಖರೀದಿಸಿದ್ದು ಇದರಿಂದ ಅದರ 250 ಕ್ಕೂ ಅಧಿಕ ನೌಕರರು ಕೆಲಸ ಉಳಿಸಿಕೊಳ್ಳಲು ಸಾದ್ಯವಾಗಿದೆ.

ಕ್ರಾಂಪ್ಟನ್ ಗ್ರೀವ್ಸ್ : ದೇಶದ ಪ್ರಮುಖ ವಿದ್ಯುತ್ ಉಪಕರಣಗಳ ತಯಾರಿಕಾ ಕಂಪೆನಿಯಾಗಿರುವ ಕ್ರಾಂಪ್ಟನ್ ಅವಂತ ಸಮೂಹದ ಅಂಗ ಕಂಪೆನಿಯಾಗಿದೆ. ಕಳೆದ ವರ್ಷ 20 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಅಲ್ಬನಿ ವಿಶ್ವವಿದ್ಯಾಯಲದ ಯೋಜನೆಯೊಂದಕ್ಕೆ ಪಾಲುದಾರನಾಗಿದೆ. ಇದರಿಂದ ನ್ಯೂಯಾರ್ಕ್ ನಲ್ಲಿ 100ಕ್ಕೂ ಅಧಿಕ ಉನ್ನತ ಮಟ್ಟದ ಹುದ್ದೆಗಳು ಸೃಷ್ಟಿಯಾಗಿವೆ .

ಇಷ್ಟೇ ಅಲ್ಲದೆ ದೇಶದ ನೂರಾರು ಸಿರಿವಂತ ಕಂಪೆನಿಗಳು ಅಮೇರಿಕಾದ ದಿವಾಳಿಯಂಚಿನಲ್ಲಿದ್ದ ಅನೇಕ ಕಂಪೆನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಇದರಿಂದ ಕಂಪೆನಿಗಳ ವಹಿವಾಟು ವಿಸ್ತರಣೆ ಆಗಿದೆ. ಜೊತೆಗೆ ಅಮೇರಿಕಾದ ನೌಕರರಿಗೆ ಉದ್ಯೋಗ ಭದ್ರತೆ ದೊರೆತಂತೆ ಆಗಿದ್ದು ಈ ಪ್ರಕ್ರಿಯೆ ಈಗಲೂ ಮುಂದುವರೆಯುತ್ತಿದೆ. ಶ್ರೀಮಂತ ಭಾರತೀಯ ಕಂಪೆನಿಗಳು ವಿದೇಶಗಳಲ್ಲಿನ ಕಂಪೆನಿಗಳನ್ನು ಖರೀದಿಸುವ ದಂಡ ಯಾತ್ರೆಯನ್ನೇ ಮಾಡುತ್ತಿವೆ.

English summary
Much before Barack Obama"s recent visit to India. Five Indian companies have aided the turnaround of struggling US firms, saving jobs and improving company performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more