ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1ರಿಂದ 2011ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ

By Rajendra
|
Google Oneindia Kannada News

Karnataka SSLC exam 2011 from April 1
ಬೆಂಗಳೂರು, ನ.17: 2011ನೇ ಸಾಲಿನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪರೀಕ್ಷೆಗಳು ಏಪ್ರಿಲ್ 1, 2011ರಿಂದ ಏ.13, 2011ರವರೆಗೆ ನಡೆಯಲಿದೆ.

ಏಪ್ರಿಲ್ 1 ರಂದು ಪ್ರಥಮ ಭಾಷೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ; ಏಪ್ರಿಲ್ 2 ರಂದು ಭಾರತೀಯ ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಡ್ರಾಯಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ನಡೆಯಲಿದೆ.

ಏಪ್ರಿಲ್ 5ರಂದು ಗಣಿತ, ಭಾರತೀಯ ಸಮಾಜಶಾಸ್ತ್ರ; ಏಪ್ರಿಲ್ 7ರಂದು ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್, ಅಲ್ಟರ್ನೇಟ್ ಇಂಗ್ಲೀಷ್; ಏಪ್ರಿಲ್ 8ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ; ಏಪ್ರಿಲ್ 11 ರಂದು ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ, ಕರ್ನಾಟಕ ಸಂಗೀತ /ಹಿಂದೂಸ್ತಾನಿ ಸಂಗೀತ; ಏಪ್ರಿಲ್ 13 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X