ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹಸೇತು ಕೆಡವಿ ನದಿಗೆ ಅಣೆಕಟ್ಟು ಕಟ್ಟಿದ ಚೀನಾ

By Mahesh
|
Google Oneindia Kannada News

China snubs India, builds dam on Brahmaputra river
ಬೀಜಿಂಗ್, ನ.17: ಕೆಂಪು ನಾಡು ಚೀನಾದೊಂದಿಗೆ ಭಾರತ ಸ್ನೇಹ ಸೇತುವೆ ಕಟ್ಟುತ್ತಿದ್ದರೆ, ಅತ್ತ ಚೀನಾ, ವಿವಾದಿತ ಬ್ರಹ್ಮಪುತ್ರಾ ಅಣೆಕಟ್ಟನ್ನು ಸದ್ದಿಲ್ಲದೆ ನಿರ್ಮಿಸಿದೆ. 510ಮೆ.ವ್ಯಾ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಸಹಕಾರಿಯಾಗಲೆಂದು ಈ ಅಣೆಕಟ್ಟನ್ನು ಚೀನಾ ನಿರ್ಮಾಣ ಮಾಡಿದೆ.

ಕಳೆದ ವಾರ ಈ ಅಣೆಕಟ್ಟಿನ ಎಲ್ಲಾ ಕಾಮಗಾರಿ ಸಂಪೂರ್ಣಗೊಂಡಿದೆ. ಜಂಗ್ಮು ಜಲವಿದ್ಯುತ್ ಘಟಕದ ಯೋಜನೆಗೆ ಸಹಕಾರಿಯಾಗಲಿರುವ ಈ ಅಣೆಕಟ್ಟು ಬ್ರಹ್ಮಪುತ್ರಾ ನದಿಗೆ ಹೊಂದಿಕೊಂಡಿದ್ದು, ಗಡಿ ಹಾಗೂ ಜಲ ಹಂಚಿಕೆ ವಿವಾದದ ನಡುವೆಯೂ ಈ ಕಾಮಗಾರಿ ಪೂರ್ಣಗೊಳಿಸಿದೆ. ಟಿಬೇಟ್ ಸ್ವಾಯುತ್ತ ಪ್ರದೇಶದ ಗೈಶಾ ಗ್ರಾಮದ ಬಳಿ ಈ ಅಣೆಕಟ್ಟನ್ನು ಕಾಣಬಹುದಾಗಿದೆ.

ವರ್ಷಾರಂಭಕ್ಕೆ ದ್ವಿಪಕ್ಷೀಯ ಮಾತುಕತೆ ನಡೆದ ಸಂದರ್ಭದಲ್ಲಿ ಈ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚೀನಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ವಿದ್ಯುತ್ ಉತ್ಪಾದನೆಯಿಂದ ಬ್ರಹ್ಮಪುತ್ರಾ ಜೀವನದಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಚೀನಾ,ಭರವಸೆ ನೀಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X