ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಡಿ. 25 ರಿಂದ ಎಬಿವಿಪಿ ಅಧಿವೇಶನ

By Mrutyunjaya Kalmat
|
Google Oneindia Kannada News

ABVP logo
ಬೆಂಗಳೂರು, ನ. 16 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 56ನೇ ರಾಷ್ಟ್ರೀಯ ಅಧಿವೇಶನ ಡಿ.25 ರಿಂದ 28ರವರೆಗೆ ನಗರದಲ್ಲಿ ನಡೆಯಲಿದೆ. ಬೆಂಗಳೂರು ವಿವಿ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಅಧಿವೇಶನ ನಡೆಯಲಿದೆ. ಎಲ್ಲ ರಾಜ್ಯಗಳಿಂದ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವರು ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಷ್ಣುದತ್ ಶರ್ಮಾ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ.25ರಂದು, ಎಬಿವಿಪಿ ದೇಶವ್ಯಾಪಿ ನಡೆಸಿದ ಕಾರ್ಯ ಕ್ರಮಗಳು, ಆಂದೋಲನ ಹಾಗೂ ಇತರ ವಿಷಯಗಳ ಕುರಿತ ಚಿತ್ರ ಪ್ರದರ್ಶನ ಇರಲಿದೆ. 26ರಂದು ಬೆಳಗ್ಗೆ 11ಕ್ಕೆ ಅಧಿವೇಶನ ಉದ್ಘಾಟನೆಯಾಗಲಿದ್ದು, ನಾನಾ ಕೋಸ್ ಗಳ ವಿದ್ಯಾರ್ಥಿಗಳ ಸಭೆ ನಡೆಯಲಿದೆ. ಒಂದು ಸಾವಿರ ವಿದ್ಯಾರ್ಥಿನಿಯರಿಗಾಗಿ ದೇಶದ ಅಭಿವೃದ್ಧಿ ಬಗ್ಗೆ ಎರಡು ಪ್ರತ್ಯೇಕಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಡಿ.27ರಂದು ನಗರದ ನಾನಾ ಪ್ರದೇಶಗಳಲ್ಲಿ ಶೋಭಾಯಾತ್ರೆ ನಡೆಯಲಿದೆ. ಯಾತ್ರೆಯು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾದನದಲ್ಲಿ ಅಂತ್ಯಗೊಳ್ಳಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿ ನಾಯಕರು ಭಾಷಣ ಮಾಡುವರು. ಪ್ರತಿ ವರ್ಷದಂತೆ ಈ ಬಾರಿ ಎಬಿವಿಪಿ ವಿಕಾಸದಲ್ಲಿ ಮಹತ್ತರ ಕೊಡುಗೆ ನೀಡಿರುವ ಪ್ರೊ. ಯಶವಂತ್ ರಾವ್ ಕೇಳ್ಕರ್ ಯುವ ಪುರಸ್ಕಾರವನ್ನು ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಬಿಹಾರದ ಆನಂದಕುಮಾರ್ ಅವರಿಗೆ ನೀಡಲಾಗುವುದು ಎಂದು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X