ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಲ್ಇ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆ : ಖೇರ್

By Super
|
Google Oneindia Kannada News

Anupam Kher
ಬೆಳಗಾವಿ, ನ. 16 : ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಪರಿವರ್ತನೆ ತಂದಿರುವ ಬೆಳಗಾವಿಯ ಕೆಎಲ್‌ಇ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಭವಿಷ್ಯದಲ್ಲಿ ಇದರ ಸೇವೆ ಜನರಿಗೆ ಇನ್ನೂ ಇಮ್ಮಡಿಯಾಗಿ ದೊರೆಯಲಿ ಎಂದು ಹಿಂದಿ ಚಿತ್ರರಂಗದ ಖ್ಯಾತ ನಟ ಅನುಪಮ ಖೇರ್ ಆಶಿಸಿದರು.

ಇಲ್ಲಿನ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಸೋಮವಾರ ನಡೆದ ಕೆಎಲ್‌ಇ ಸಂಸ್ಥೆಯ 95ನೇ ಸಂಸ್ಥಾಪನೆ ದಿನ ಮತ್ತು ತಮ್ಮ ಆಡಳಿತದ 25 ವರ್ಷಗಳನ್ನು ಪೂರೈಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆಯವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಜೀವನದಲ್ಲಿ ಆಶಾವಾದ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಅದಕ್ಕೆ ಈ ಸಂಸ್ಥೆ ಕಟ್ಟಿ ಬೆಳೆಸಿದವರೇ ಸಾಕ್ಷಿ ಎಂದರು.

ಶಬ್ದಕ್ಕಿಂತ ಮೌನವೇ ಶ್ರೇಷ್ಠ. ಪ್ರಚಾರಕ್ಕಿಂತ ಕೆಲಸ ದೊಡ್ಡದು. ಕೆಎಲ್‌ಇ ಸಂಸ್ಥೆ ಮೌನವಾಗಿದ್ದುಕೊಂಡು ವಿಶ್ವ ಶೈಕ್ಷಣಿಕ ನಕ್ಷೆಯಲ್ಲಿ ಹೆಜ್ಜೆ ಗುರುತು ಮೂಡಿಸಿದೆ. ಕೋರೆಯವರು ಜೀವಿತಾವಧಿಯ ದೊಡ್ಡ ಸಾಧನೆ ಮಾಡಿದ್ದಾರೆ. ಉತ್ತಮ ಕೆಲಸಗಳು ಯಾವತ್ತೂ ಗಮನ ಸೆಳೆಯುತ್ತವೆ. ಹೀಗಾಗಿ ಕೆಎಲ್‌ಇ ಎಲ್ಲರ ಬಾಯಲ್ಲಿ ಇದೆ ಎಂದು ನುಡಿದರು.

ಸಾಮಾನ್ಯ ಕುಟುಂಬದಿಂದ ಬಂದ ನಾನು, ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಇಲ್ಲಿಯವರೆಗೆ ದುಡಿದಿದ್ದೇನೆ. ಅನೇಕ ತೊಂದರೆ- ತಾಪತ್ರಯಗಳನ್ನು ಎದುರಿಸಿದ್ದೇನೆ. ಯುವ ಜನಾಂಗಕ್ಕೆ ಸರಳ ಜೀವನ ಹಿಡಿಸಲಿಕ್ಕಿಲ್ಲ. ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ನಾನು ಈ ಮಟ್ಟಕ್ಕೆ ಬೆಳೆದೆ ಎಂದು ತಿಳಿಸಿದರು.

ಜಾಗತಿಕ ಮಾಧ್ಯಮಗಳು ಇಂದು ನಕಾರಾತಕ ವರದಿಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿವೆ. ನಿತ್ಯದ ಸುದ್ದಿಗಳು ಭ್ರಷ್ಟಾಚಾರ, ದುರ್ಘಟನೆಗಳ ಸುತ್ತವೇ ಇರುತ್ತವೆ. ಅವುಗಳನ್ನೇ ಪ್ರಮುಖವಾಗಿ ಪ್ರಚುರಪಡಿಸಲಾಗುತ್ತಿದ್ದು, ಸಕಾರಾತ್ಮಕ ಸಂಗತಿಗಳನ್ನು ಮರೆಯಲಾಗುತ್ತಿದೆ. ಇದು ಸಾಮಾಜಿಕವಾಗಿ ಆರೋಗ್ಯಕರವಲ್ಲ. ಎಲ್ಲವನ್ನೂ ವಾಣಿಜ್ಯ ದೃಷ್ಟಿಯಿಂದಲೇ ನೋಡಬಾರದು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X