ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆಗೆ ಕೈ ತಪ್ಪಿದ ಟೆಲಿಕಾಂ ಕಪಿಲ್ ಕೈಗೆ

By Mahesh
|
Google Oneindia Kannada News

Minister Kapil Sibal
ನವದೆಹಲಿ, ನ.15: 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿ ಎ. ರಾಜಾ ತೆರವು ಮಾಡಿರುವ ದೂರ ಸಂಪರ್ಕ ಖಾತೆಯ ಹೆಚ್ಚುವರಿ ಹೊಣೆಯನ್ನು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್‌ಗೆ ನೀಡಲಾಗಿದೆ. ಸಿಬಲ್ ಅವರು ಈ ಖಾತೆಯ ಹೊಣೆ ನಿರ್ವಹಿಸುವರೆಂದು ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಅಧಿಕೃತವಾಗಿ ಘೋಷಿಸಿದರು. ಕಪಿಲ್ ಸಿಬಲ್ ಅವರು ಇಂದು ಬೆಳಗ್ಗೆ ತಮ್ಮ ಹೊಸ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ದೂರಸಂಪರ್ಕ ಸಚಿವಾಲಯವು ಭ್ರಷ್ಟಾಚಾರದ ಆರೋಪ ಹೊತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿರಿಯ ಹಾಗೂ ಅನುಭವಿಯೊಬ್ಬರು ಅದನ್ನು ನಿರ್ವಹಿಸಿದರೆ ಒಳ್ಳೆಯದೆಂಬುದು ಈ ನಿರ್ಧಾರದ ಹಿಂದಿನ ಲೆಕ್ಕಾಚಾರವಾಗಿದೆ.

ಅಧಿವೇಶನ ನಡೆಯುತ್ತಿರುವ ವೇಳೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಪಥ್ವೀರಾಜ್ ಚವಾಣ್ ತೆರವು ಮಾಡಿದ್ದ ವಿಜ್ಞಾನ-ತಂತ್ರಜ್ಞಾನ ಹಾಗೂ ಭೂವಿಜ್ಞಾನ ಖಾತೆಯನ್ನು ವಾರದ ಹಿಂದಷ್ಟೇ ವಕೀಲರಾಗಿರುವ ಸಿಬಲ್‌ಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಡಿಎಂಕೆಗೆ ಕೈ ಕೊಟ್ಟ ಯುಪಿಎ: ರಾಜಾ ಅವರ ಸ್ಥಾನಕ್ಕೆ ಮಾಜಿ ಸಚಿವ ಟಿ.ಆರ್ ಬಾಲು, ಡಿಎಂಕೆ ವಕ್ತಾರ ಟಿ.ಕೆ.ಎಸ್ ಇಳಂಗೋವನ್, ಸಂಸದ ಎ.ಕೆ.ಎಸ್ ವಿಜಯನ್ ಅಲ್ಲದೆ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ ಅವರನ್ನು ಕೂರಿಸಲಾಗುವುದು ಎನ್ನಲಾಗಿತ್ತು. ಇದರ ಜೊತಗೆ ಕೇಂದ್ರ ಸಂಪುಟದಲ್ಲಿ ಕರುಣಾನಿಧಿ ಕುಟುಂಬಸ್ಥರ ಸಂಖ್ಯೆ ಹೆಚ್ಚಾಗಿರುವ ಕಾರಣ ಕನ್ನಿಮೋಳಿಗೆ ಸ್ಥಾನ ಸಿಗಲಾರದು ಎಂಬ ಸುದ್ದಿ ಹರಡಿತ್ತು. ಆದರೆ, ಡಿಎಂಕೆ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿ, ಕಪಿಲ್ ಸಿಬಲ್ ಅವರನ್ನು ರಾಜಾ ಸ್ಥಾನದಲ್ಲಿ ಯುಪಿಎ ಕೂರಿಸಿದೆ.

English summary
Congress snubbed DMK as it named Kapil Sibal as the new Telecom Minister after A Raja"s resignation for 2G Spectrum scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X