ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ಸಿಗೆ ಸೇರಲು ನಾಳೆನೇ ಕಡೆ ದಿನ

By Mahesh
|
Google Oneindia Kannada News

 Infosys Hiring Freshers
ಬೆಂಗಳೂರು, ನ.16: ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ಫೋಸಿಸ್ ನಲ್ಲಿ ಈಗಷ್ಟೇ ಡಿಗ್ರಿ ಮುಗಿಸಿರುವ ಇಂಜಿನಿಯರಿಂಗ್ ಪದವಿಧರರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಸಿಸ್ಟಂ ಇಂಜಿನಿಯರ್ ಹುದ್ದೆಗಾಗಿ ಸೂಕ್ತರಾದ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ನೌಕರಿಯ ಅಗತ್ಯಕ್ಕೆ ತಕ್ಕ ಅರ್ಹತೆಯಿರುವ ಅಭ್ಯರ್ಥಿಗಳು ತಕ್ಷಣವೇ ಅಪ್ಲೈ ಮಾಡಿ ಬಿಡಿ. ನಾಳೆಯೇ ಕೊನೆ ದಿನ.

ವಿದ್ಯಾರ್ಹತೆ:

* ಬಿ.ಇ/ಬಿ.ಟೆಕ್/ ಎಂ.ಇ/ಎಂ.ಟೆಕ್/ಎಂಸಿಎ/ಎಂಎಸ್ಸಿ(ಕಂಪ್ಯೂ ಸೈನ್ಸ್/ಎಲೆಕ್ಟ್ರಾನಿಕ್ಸ್/ಗಣಿತ/ಭೌತಶಾಸ್ತ್ರ/ಸ್ಟಾಟಿಸಿಕ್ಸ್/ಮಾಹಿತಿ ತಂತ್ರಜ್ಞಾನ/ಇನ್ಫೋ ಸೈನ್ಸ್ ಮಾತ್ರ)
* ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆಯ ದಾಖಲೆಗಳು ಏಕ್ ದಂ ಚೆನ್ನಾಗಿರಬೇಕು(ಉತ್ತಮ ಅಂಕಗಳೊಂದಿಗೆ ಪಾಸಾಗಿರುವವರಿಗೆ ಮಾತ್ರ ಛಾನ್ಸ್)
* 2010 ಶೈಕ್ಷಣಿಕ ವರ್ಷದ ಪದವಿ ಪರೀಕ್ಷೆಯಲ್ಲಿ ಉತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಬೇಕು.
* ಕಳೆದ 9 ತಿಂಗಳಲ್ಲಿ ಇನ್ಫೋಸಿಸ್ ನಡೆಸಿದ ಯಾವುದೇ ಸಂದರ್ಶನದಲ್ಲಿ ಪಾಲ್ಗೊಂಡಿರಬಾರದು.

ಮೇಲ್ಕಂಡ ಅರ್ಹತೆಯುಳ್ಳವರು ತಮ್ಮ ಸ್ವ ವಿವರಗಳುಳ್ಳ ಅರ್ಜಿಯನ್ನು [email protected]ಗೆ ಮಂಗಳವಾರ ನವೆಂಬರ್ 17, 2010 ರೊಳಗೆ ಕಳಿಸತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಇಮೇಲ್ ಮೂಲಕ ತಿಳಿಸಲಾಗುವುದು ಎಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ವಿಭಾಗದವರು ಪ್ರಕಟಿಸಿದ್ದಾರೆ.

English summary
Infosys hiring Entry Level Software Engineers for the role of Systems Engineer who have a passion to work and excel in a dynamic environment. Candidates can send resumes on or before November 17,2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X