ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪ್ರತಿವಾದಿಯನ್ನಾಗಿಸಲು ಹೈಕೋರ್ಟ್ ಅಸ್ತು

By Super
|
Google Oneindia Kannada News

Karnataka High Court
ಬೆಂಗಳೂರು, ನ. 16 : ಅನರ್ಹ ಪಕ್ಷೇತರ ಶಾಸಕರ ಎಲ್ಲ ಪೂರಕ ಹಾಗೂ ತಿದ್ದುಪಡಿ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಹೈಕೋರ್ಟ್ ಒಪ್ಪಿಗೆ ಸೂಚಿಸಿ, ವಿಚಾರಣೆಯನ್ನು ನ.29ಕ್ಕೆ ಮುಂದೂಡಿದೆ.

ಕಳೆದ ನ.12ರಂದು ವಿಚಾರಣೆ ನಡೆಸಿದ್ದ ನ್ಯಾ ಮೋಹನ್ ಶಾಂತನಗೌಡರ್, ನ್ಯಾ ಅಬ್ದುಲ್ ನಜೀರ್ ಹಾಗೂ ನ್ಯಾ ಎಎಸ್ ಬೋಪಣ್ಣ ಅವರ ಪೂರ್ಣ ಪೀಠ ಪೂರಕ ಅರ್ಜಿಗಳ ಪರಿಗಣನೆ ಕುರಿತು ಸೋಮವಾರ ಕಾಯ್ದಿಟ್ಟ ತೀರ್ಪನ್ನು ಪ್ರಕಟಿಸಿತು.

ಮೂಲ ಅರ್ಜಿಯಲ್ಲಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ 2ನೇ ಅರ್ಜಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿವಾದಿಯಾಗಿಸಲು, ಹೆಚ್ಚುವರಿ 32 ಅಂಶಗಳ ಸೇರ್ಪಡೆ, ತಿದ್ದುಪಡಿ ಅರ್ಜಿ ಮತ್ತು ಐವರು ಮತದಾರರನ್ನು ಪ್ರತಿವಾದಿಯಾಗಿಸಿ ಸೇರಿಸಿದ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ. ಇದರೊಂದಿಗೆ ಪಕ್ಷೇತರ ಅನರ್ಹ ಶಾಸಕರು ಈ ಪ್ರಕರಣದಲ್ಲಿ ಮೊದಲ ಕಂಟಕದಿಂದ ಭಾಗಶಃ ಪಾರಾದಂತಾಗಿದೆ. ಒಂದು ವೇಳೆ ಹೈಕೋರ್ಟ್ ಅವಕಾಶ ನಿರಾಕರಿಸಿದ್ದರೆ ಪಕ್ಷೇತರ ಶಾಸಕರ ಅರ್ಜಿ ಜೀವ ಕಳೆದುಕೊಳ್ಳುತ್ತಿತ್ತು.

ಸಮಗ್ರ ಅರ್ಜಿ ಸಲ್ಲಿಕೆ : ಮೂಲ ಅರ್ಜಿಗೆ ವೈಯಕ್ತಿಕವಾಗಿ ಸ್ಪೀಕರ್ ಕೆಜಿ ಬೋಪಯ್ಯ ಅವರನ್ನು ಪ್ರತಿವಾದಿಯಾಗಿಸಿ ಮತ್ತು ಹೆಚ್ಚುವರಿ 32 ಅಂಶಗಳನ್ನು ಅರ್ಜಿಗೆ ಸೇರ್ಪಡೆ ಮಾಡಬೇಕು. ಅದರೊಡನೆ ಮೂಲ ಅರ್ಜಿಯಲ್ಲಿ ನಾವೆಂದೂ ಬಿಜೆಪಿ ತೊರೆದಿಲ್ಲ ಎಂಬ ಅಂಶವನ್ನು ತಿದ್ದುಪಡಿ ಮಾಡಿ ನಾವೆಂದೂ ಬಿಜೆಪಿ ಸೇರಿಲ್ಲ ಎಂಬುದಾಗಿ ಮಾಡಬೇಕಿದೆ.

ಎರಡನೇ ರಿಟ್ ಅರ್ಜಿಯಲ್ಲಿ ಐವರು ಮತದಾರರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿವಾದಿಯಾಗಿಸಿ ಅರ್ಜಿಯಲ್ಲಿ ಸೇರಿಸಬೇಕಿದೆ. ಇವೆಲ್ಲವನ್ನೂ ಸೇರಿಸಿ ಮಂಗಳವಾರ ಸಂಜೆಯೊಳಗೆ ಸಮಗ್ರ ಅರ್ಜಿ ಸಲ್ಲಿಸಲು ಅರ್ಜಿದಾರರ ಪರ ವಕೀಲರು ಒಪ್ಪಿಕೊಂಡಿದ್ದಾರೆ. ಸಮಗ್ರ ಅರ್ಜಿ ಸಲ್ಲಿಕೆಗೆ ಸಮಯಾವಕಾಶ ಬೇಕಾದರೆ ತೆಗೆದುಕೊಳ್ಳಿ, ಆದರೆ ಮತ್ತೆ ತಿದ್ದುಪಡಿ ಅಥವಾ ಸೇರ್ಪಡೆಗೆ ಕೋರ್ಟ್ ಅವಕಾಶ ನೀಡುವುದಿಲ್ಲ ಎಂದು ಕೋರ್ಟ್ ಎಚ್ಚರಿಸಿದೆ.

English summary
The Karnataka High Court on Monday allowed the applications filed by five Independent MLAs, seeking to implead Speaker K G Bopaiah and CM B S Yeddyurappa, in the case challenging their disqualification from Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X