ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕಟ್ಟಡ ಕುಸಿತ 60ಕ್ಕೂ ಹೆಚ್ಚು ಸಾವು

By Mahesh
|
Google Oneindia Kannada News

Delhi Building Collapse
ನವದೆಹಲಿ, ನ.16: ರಾಜಧಾನಿಯಲ್ಲಿ ಆರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 60 ಜನರು ಮೃತಪಟ್ಟಿದ್ದು 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಕ್ಕಿಕೊಂಡಿರುವ ಶಂಕೆ ಇದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಸೋಮವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಇಲ್ಲಿನ ಲಕ್ಷ್ಮಿ ನಗರದ ಲಲಿತಾ ಪಾರ್ಕ್ ಎಂಬಲ್ಲಿ ರಾತ್ರಿ 8.15ರ ಸಮಯದಲ್ಲಿ ಈ ದುರ್ಘಟನೆಸಂಭವಿಸಿದೆ.ದುರಂತದಲ್ಲಿ ಈವರೆಗೂ 60 ಜನರನ್ನು ರಕ್ಷಿಸಲಾಗಿದೆ.ಬದುಕುಳಿದಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಸಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ವಾಲಿಯಾ ತಿಳಿಸಿದ್ದಾರೆ. ಸುಮಾರು 15 ವರ್ಷ ಹಳೆಯದಾಗಿದ್ದ ಈ ಕಟ್ಟಡವು ಈ ಬಾರಿಯ ಮಳೆಗಾಲದಲ್ಲಿ ಸಾಕಷ್ಟು ಶಿಥಿಲಗೊಂಡಿತ್ತು. ಅಷ್ಟೇ ಅಲ್ಲದೆ ಯಮುನಾ ನದಿಯ ಪ್ರವಾಹದಿಂದಲೂ ಕಟ್ಟಡಕ್ಕೆ ಹಾನಿಯುಂಟಾಗಿತ್ತು.ಇದರಿಂದಾಗಿ ಕಟ್ಟಡ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳೀಯರ ಪ್ರಕಾರ ನೆಲ ಮಾಳಿಗೆಯಲ್ಲಿ ಇನ್ನೂ ನೀರು ನಿಂತಿತ್ತು. ಅಲ್ಲದೇ ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಕಟ್ಟಡವನ್ನು ಇನ್ನು ಎತ್ತರಿಸುವ ಕಾರ್ಯ ನಡೆಯುತ್ತಿತ್ತು.ಗಾಯಗೊಂಡಿರುವವರಲ್ಲಿ ಬಹುತೇಕ ಮಂದಿ ಕೂಲಿಯಾಳುಗಳು ಎನ್ನಲಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ಕ್ರೇನ್‌ಗಳ ಅಲಭ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನೆಲಮಾಳಿಗೆಯಲ್ಲಿದ್ದ ನೀರನ್ನು 2ತಿಂಗಳಾದರೂ ಹೊರ ಹಾಕದೆ ನಿರ್ಲಕ್ಷ್ಯ ತೋರಲಾಗಿದೆ. ಈ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.

English summary
More than 60 people were killed and other 90 injured when a five-storey building collapsed in Laxmi Nagar, east Delhi on Monday, Nov 15 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X