• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿಗಳಿಗೆ ಪುರುಸೊತ್ತಿಲ್ಲವೇ ? ಖರ್ಗೆ

By Mrutyunjaya Kalmat
|

ಬೆಂಗಳೂರು, ನ. 14 : ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪುರುಸೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ನವೀಕೃತ ಕಟ್ಟಡದ ಮೊದಲನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಕೇಂದ್ರದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ರಾಜ್ಯದಲ್ಲಿ ಅನುಷ್ಠಾನವಾಗುತ್ತಿದ್ದು, ಆಹ್ವಾನಿಸಿದ್ದರೂ ಸಿಎಂ ಬರುವುದಿಲ್ಲ. ಕನಿಷ್ಠ 100 ಕೋಟಿ ರೂ.ಗಿಂತ ದೊಡ್ಡ ಮೊತ್ತದ ಯೋಜನೆಯ ಉದ್ಘಾಟನೆಗಾದರೂ ಬರಬಹುದಿತ್ತು. ರಾಜ್ಯ ಸಚಿವರು ಮಾತ್ರ ಆಗಮಿಸುತ್ತಾರೆ. ಆದರೆ, ನಮಗೆ ನಿರ್ಣಯ ಕೈಗೊಳ್ಳುವ ಜನ ಬರಬೇಕಾದ ಅಗತ್ಯವಿದೆ ಎಂದರು.

80 ರಿಂದ 100 ರೂ. ಬೆಲೆಯ ಸೀರೆ ಹಂಚಲು ರಾಜ್ಯಾದ್ಯಂತ ಸುತ್ತುವ ಮುಖ್ಯಮಂತ್ರಿ ಅದಕ್ಕಾಗಿ ಅಬ್ಬಬ್ಬಾ ಅಂದರೆ 100 ಕೋಟಿ ರೂ. ಖರ್ಚು ಮಾಡಬಹುದು. ಆದರೆ, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಮೂರೂವರೆ ಸಾವಿರ ಕೋಟಿ ರೂ. ನೀಡುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಬರಲು ಸಮಯ ಇಲ್ಲವೇ? ಎಂದು ಪ್ರಶ್ನಿಸಿದರು.

English summary
Upset over the non participation of Chief Minister B.S. Yeddyurappa in the inaugural function of the newly constructed ESIC building in Rajajinagar, Union labour minister Mallikarjun Kharge lamented that the Chief Minister’s absence had become an impediment to taking forward many important projects in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X