ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಕಾಂತ್ ಸೇರಿದಂತೆ ನಾಲ್ಕು ಮಂದಿಗೆ ಅಮ್ಮ ಪ್ರಶಸ್ತಿ

By Rajendra
|
Google Oneindia Kannada News

A R Manikanth
ಸೇಡಂ , ನ.13: ಇಲ್ಲಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಅಮ್ಮ ಪ್ರಶಸ್ತಿಗೆ ಪ್ರಸಕ್ತ ಸಾಲಿಗೆ ಖ್ಯಾತ ಕವಿಯತ್ರಿ ಡಿ.ಬಿ.ರಜಿಯಾ, ಕಾದಂಬರಿಕಾರ ಡಾ.ಲಕ್ಷ್ಮಣಕೌಂಟೆ, ಪತ್ರಕರ್ತ ಬಿ.ಎನ್.ಮಲ್ಲೇಶ ಹಾಗು ಜನಪ್ರಿಯ ಲೇಖಕರಾದ ಎ.ಆರ್.ಮಣಿಕಾಂತ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮಪ್ರಶಸ್ತಿ ಸಂಚಾಲಕರಾದ ಪ್ರಭಾಕರ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.ಬಿ.ರಜಿಯಾ ಅವರ ಕವಿತೆಗಳು, ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ 'ಆಂದೋಲನ', ಬಿ.ಎನ್.ಮಲ್ಲೇಶರ 'ಬ್ರೇಕಿಂಗ್ ನ್ಯೂಸ್' ಮತ್ತು ಎ.ಆರ್.ಮಣಿಕಾಂತರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಕೃತಿಗಳನ್ನು ಈ ಸಾಲಿನ ಅಮ್ಮಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದೇ ನವೆಂಬರ್ 29ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರಗುವ ಸಮಾರಂಭದಲ್ಲಿ ಅಮ್ಮಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಶಮಾನೋತ್ಸವ : ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ಅಮ್ಮಪ್ರಶಸ್ತಿಗೆ ಈಗ ದಶಮಾನದ ಸಂಭ್ರಮ !
ಕಳೆದ ಹತ್ತು ವರ್ಷಗಳಿಂದ ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ;ಗೌರವಿಸಿದ್ದಾರೆ.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮಪ್ರಶಸ್ತಿ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪತ್ರಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದು, ಇದು ಗೌರವಾನ್ವಿತ ಪ್ರಶಸ್ತಿಯಾಗಿ ಎಂಬುದಕ್ಕೆ ಸಾಕ್ಷಿ.

ಈ ಬಾರಿ ಅಮ್ಮ ಪ್ರಶಸ್ತಿಗೆ ದಶಮಾನದ ಸಂಭ್ರಮವಿರುವುದರಿಂದ ಸಾಂಕೇತಿಕವಾಗಿ ಹತ್ತು ಜನ ಸಾಹಿತ್ಯ ಸಾಧಕರನ್ನು ಸತ್ಕರಿಸಬೇಕು ಎಂಬ ಉದ್ದೇಶದಿಂದ ನಾಲ್ವರಿಗೆ ಅಮ್ಮ ಪ್ರಶಸ್ತಿ ಹಾಗು ಆರು ಜನರಿಗೆ ಅಮ್ಮ ಪ್ರಶಸ್ತಿ ದಶಮಾನೋತ್ಸವ ವಿಶೇಷ ಪುರಸ್ಕಾರ ನೀಡಲಾಗುತ್ತಿದೆ. ವಿಶೇಷ ಪುರಸ್ಕಾರ ವಿಜೇತರ ಹೆಸರುಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಶಸ್ತಿ ಸಂಚಾಲಕ ಪ್ರಭಾಕರ ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X