ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತರಿಗೆ 15 ದಿನ ಕಂಪ್ಲೀಟ್ ಬೆಡ್ ರೆಸ್ಟ್

By Mahesh
|
Google Oneindia Kannada News

Lokayukta Santosh Hegde
ಬೆಂಗಳೂರು, ನ.12: ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರು 15 ದಿನಗಳ ಸಂಪೂರ್ಣ ಬೆಡ್ ರೆಸ್ಟ್ ನಲ್ಲಿದ್ದಾರೆ. ಮಂಗಳವಾರ ನಗರದ ಮಣಿಪಾಲ್ ಆಸ್ಪತ್ರೆಗೆ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಬಂದಿದ್ದ ಅವರಿಗೆ ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ವಿಶ್ರಾಂತಿ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಇದರಿಂದ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸದ್ಯಕ್ಕೆ ನಿಟ್ಟಿಸಿರುಬಿಡುವಂತಾಗಿದೆ.

ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ, "ಸಂತೋಷ್ ಹೆಗ್ಡೆ ಕಳೆದ ಮಂಗಳವಾರ ಹೃದಯದ ತೊಂದರೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅವರು ಶೀಘ್ರದಲ್ಲಿಯೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ. ಆದರೂ ಸದ್ಯದ ಅವರ ಪರಿಸ್ಥಿತಿಯಲ್ಲಿ ಅವರು 15 ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವುದು ಅವಶ್ಯ. ಅವರು ಔಷಧಿಯಿಂದಲೇ ಗುಣಮುಖರಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಬಂದಿಲ್ಲ. ಹಾಗಿದ್ದರೂ 15 ದಿನಗಳ ಕಾಲ ಅವರು ಒತ್ತಡರಹಿತರಾಗಿ ವಿಶ್ರಾಂತಿ ಪಡೆದುಕೊಳ್ಳಬೇಕು" ಎಂದು ವೈದ್ಯರು ಸೂಚಿಸಿದ್ದಾರೆ.

ನ್ಯಾ ಸಂತೋಷ್ ಹೆಗ್ಡೆ 2006 ರ ಆಗಸ್ಟ್ ತಿಂಗಳಲ್ಲಿ ಐದು ವರ್ಷ ಅವಧಿಗೆ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು. ಇವರ ಈ ಅಧಿಕಾರಾವಧಿಯಲ್ಲಿ ಬಿಜೆಪಿ ಸರ್ಕಾರದ ಅನೇಕ ಹಗರಣಗಳು ಸೇರಿದಂತೆ ಅನೇಕ ಭ್ರಷ್ಟ ಅಧಿಕಾರಗಳ ಅವ್ಯವಹಾರಗಳು ಬೆಳಕಿಗೆ ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X