ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಯೋಜನೆಗಳಿಗೆ ಸಚಿವ ಸುರೇಶ್ ಚಾಲನೆ

By Mahesh
|
Google Oneindia Kannada News

Minister Suresh Kumar
ಬೆಂಗಳೂರು, ನ.12: ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳನ್ನು ಪರಿಸರ ಸ್ನೇಹಿಯಾಗಿಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ, ಕಿರುವನ ನಿರ್ಮಾಣ, ಸಿಎಫ್ ಎಲ್ ಬಲ್ಬ್ ಬಳಕೆ, ಸ್ವಚ್ಛತೆಗೆ ಆದ್ಯತೆ ಮುಂತಾದ ವಿಷಯಗಳನ್ನು ಆಧಾರಿಸಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕಾನೂನು ಮತ್ತು ನಗರಾಭಿವೃದ್ಧಿ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಅವರು ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರತಿ ಪಾಲಿಕೆಗೆ ಮುಖ್ಯಮಂತ್ರಿಯವರ 100 ಕೋಟಿ ರೂ. ಮೊತ್ತದ ವಿಶೇಷ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ತೃಪ್ತಿಕರವಾಗಿ ನಡೆದಿದೆ ಎಂದರು.

ಸಿಎಫ್‌ಎಲ್ ಹಾಗೂ ಎಲ್‌ಇಡಿ ಬಲ್ಬ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗುವುದು. ಈಗಾಗಲೆ ಸಿಎಫ್ ಎಲ್ ಬಲ್ಬ್ ಅಳವಡಿಕೆಯನ್ನು ಯಶವಿಯಾಗಿ ಜಾರಿಗೊಳಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಚಿವರು ಶ್ಲಾಘಿಸಿದರು. ಸಿಎಫ್ಎಲ್ ಹಾಗೂ ಎಲ್ ಇಡಿ ಬಲ್ಬ್ ಗಳ ಬಳಕೆಯಿಂದ ಶೇ. 50 ರಿಂದ 60 ರಷ್ಟು ವಿದ್ಯುತ್ ಉಳಿತಾಯ ಸಾಧ್ಯ. ಬಡವರಿಗೆ ಸಬ್ಸಿಡಿ ದರದಲ್ಲಿ ಸಿಎಫ್ ಎಲ್ ಬಲ್ಬ್ ವಿತರಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಈ ಯೋಜನೆ ಕಾರ್ಯ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಮುಖ್ಯಮಂತ್ರಿಯವರ ಅನುದಾನ ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ ಪ್ರತಿ ಪಾಲಿಕೆಗೆ ರೂ. 100 ಕೋಟಿ ಅನುದಾನಕ್ಕೆ 800 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ನಿರ್ವಹಣೆಗೆ 2 ಕೋಟಿ ರೂ.ಗಳ ಯೋಜನೆ ರೂಪಿಸಲಾಗುವುದು ಎಂದರು.

ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಾಣ ಹಾಗೂ ಚರಂಡಿ ಶುದ್ಧೀಕರಣಕ್ಕೆ ಪೌರ ಕಾರ್ಮಿಕರನ್ನು ಬಳಸುವ ಬದಲಿಗೆ ಯಂತ್ರ ಬಳಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಿರು ಅರಣ್ಯ ಅಭಿವೃದ್ಧಿ :
ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿನ ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಸಾರ್ವಜನಿಕರ ಅನುಕೂಲಕ್ಕಿಂತ ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಇದನ್ನು ತಪ್ಪಿಸಲು ಐದು ಎಕರೆಗಿಂತ ಹೆಚ್ಚು ವಿಸ್ತೀರ್ಣವುಳ್ಳ ಉದ್ಯಾನವನಗಳನ್ನು ಕಿರು ಅರಣ್ಯಗಳನ್ನಾಗಿ ರೂಪಾಂತರಿಸಲು ಪಾಲಿಕೆ ಆಡಳಿತಕ್ಕೆ ಸಲಹೆ ನೀಡಲಾಗಿದೆ ಎಂದರು.

ಆಸ್ತಿತೆರಿಗೆ ಸಂಗ್ರಹಣೆ: ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ತೆ ತೆರಿಗೆ ಸಂಗ್ರಹಣೆಯಲ್ಲಿ ಮಹಾನಗರ ಪಾಲಿಕೆಗಳು ಉತ್ತಮ ಪ್ರಗತಿ ಸಾಧಿಸಿವೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ.42ರಿಂದ 50 ರಷ್ಟು ಆಸ್ತಿತೆರಿಗೆ ಸಂಗ್ರಹವಾಗಿದ್ದರೆ, ಪ್ರಸಕ್ತ ವರ್ಷ ಆ ಪ್ರಮಾಣ ಶೇ.82 ರಿಂದ 85ಕ್ಕೆ ಹೆಚ್ಚಳವಾಗಿದೆ ಎಂದು ಸುರೇಶ್‌ಕುಮಾರ್ ಹರ್ಷ ವ್ಯಕ್ತಪಡಿಸಿದರು.

ಡಾರ್ಮೆಂಟರಿಗಳ ನಿರ್ಮಾಣ :
ಪ್ರಯಾಣಿಕರು ಹಾಗೂ ಇತರೆ ಜನ ಬಸ್ ನಿಲ್ದಾಣ, ಉದ್ಯಾನವನಗಳಲ್ಲಿ ಮಲಗುವುದನ್ನು ತಪ್ಪಿಸಲು ಪಾಲಿಕೆಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯುಳ್ಳ ಡಾರ್ಮೆಟರಿ ನಿರ್ಮಿಸಲು ಸೂಚಿಸಲಾಗಿದೆ. ಈ ಕಾರ್ಯಕ್ಕೆ ಈಗಾಗಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಮೊದಲ ಹಂತದಲ್ಲಿಸುಮಾರು 7,250 ಮಂದಿ ನಿರಾಶ್ರಿತರುಗಳನ್ನು ಗುರುತಿಸಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಸ್ಪಷ್ಟಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X