ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ನಲ್ಲಿ ಸಾವರ್ಕರ್ ಸ್ಮಾರಕಕ್ಕೆ ಬಿಎಸ್ ವೈ ಒತ್ತಾಯ

By Mahesh
|
Google Oneindia Kannada News

Veer Savarkar
ಬೆಂಗಳೂರು, ನ.11: ಫ್ರಾನ್ಸ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ಮನಮೋಹನ್ ಸಿಂಗ್ ಗೆ ಪತ್ರ ಬರೆದಿದ್ದಾರೆ.

ಈ ವರ್ಷ ಸಾವರ್ಕರ್‌ ಅವರ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿರುವುದರಿಂದ ತ್ವರಿತವಾಗಿ ಆ ಕಾರ್ಯ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಯವರು ಪ್ರಧಾನಿ ಡಾ.ಮನಮೋಹನ್ ಸಿಂಗ್‌ರಲ್ಲಿ ಮನವಿ ಮಾಡಿದ್ದಾರೆ.

ಸಮುದ್ರಕ್ಕೆ ಹಾರಿದ ನೆನಪು: ಫ್ರಾನ್ಸ್ ನ ಮಾರ್ಸಿಲೆಸ್ ನಲ್ಲಿ 90"ರ ದಶಕದಲ್ಲಿ ಸಾವರ್ಕರ್ ಸ್ಮಾರಕಕ್ಕೆ ಅಲ್ಲಿನ ಆಡಳಿತ ಮುಂದಾಗಿತ್ತು. ಆದರೆ, ಆ ಕಾರ್ಯ ಪೂರ್ಣಗೊಳ್ಳಲಿಲ್ಲ. ಮಾರ್ಚ್ 13, 1910 ರಲ್ಲಿ ಲಂಡನ್ ನಲ್ಲಿ ಸಾವರ್ಕರ್ ಬಂಧಿಸಲಾಗಿತ್ತು. ಬ್ರಿಟಿಷ್ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾರ್ಗಮಧ್ಯದಲ್ಲಿ ಮಾರ್ಸಿಲೆಸ್ ನ ಸಮುದ್ರಕ್ಕೆ ಹಾರಿದ್ದರು. ಆದರೆ, ಜುಲೈ 8, 1910 ರಂದು ಸಾವರ್ಕರ್ ನಡೆಸಿದ ಯತ್ನ ವಿಫಲವಾಯಿತು. ಮುಂದೆ, ಅಂಡಮಾನ್ ಹಾಗೂ ನಿಕೋಬರ್ ದ್ವೀಪದಲ್ಲಿರುವ ಸೆಲ್ಯುಲಾರ್ ಜೈಲಿನಲ್ಲಿ 50 ವರ್ಷದ ಸೆರೆಮನೆವಾಸ ಶಿಕ್ಷೆಗೆ ಒಳಪಡಬೇಕಾಗಿದ್ದು ಈಗ ಇತಿಹಾಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X