ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಕೈಲಿ ಸಚಿವ ರಾಜಾ ಭವಿಷ್ಯ ನಿರ್ಧಾರ

By Mahesh
|
Google Oneindia Kannada News

Telecom Minister A Raja
ನವದೆಹಲಿ, ನ.11: 2ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು ಇದಕ್ಕೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಎ.ರಾಜಾ ಅವರು ನೇರ ಹೊಣೆ ಎಂದು ಮಹಾಲೆಕ್ಕ ಪರಿಶೋಧಕ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್-CAG) ವರದಿ ನೀಡಿದೆ. ರಾಜಾ ತಲೆದಂಡಕ್ಕೆ ವಿಪಕ್ಷಗಳಿಂದ ಒತ್ತಡ ಹೆಚ್ಚುತ್ತಿದ್ದಂತೆ, ಕಾಂಗ್ರೆಸ್ ನೇತೃತ್ವದ ಯುಪಿಎ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಜವಾಬ್ದಾರಿಯನ್ನು ಮಿತ್ರ ಪಕ್ಷ ಡಿಎಂಕೆಗೆ ವಹಿಸಿದೆ.

'2ಜಿ ಸ್ಪೆಕ್ಟ್ರಂ ಗುತ್ತಿಗೆಯನ್ನು ಅಕ್ರಮವಾಗಿ ನೀಡಲಾಗಿದೆ. ಎಲ್ಲ ನೀತಿ- ನಿಯಮಗಳನ್ನು ಗಾಳಿಗೆ ತೂರಲಾಗಿದೆ' ಎಂದು ಸಿಎಜಿ ವರದಿಯಲ್ಲಿ ರಾಜಾ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ದೂರಸಂಪರ್ಕ ಸಚಿವಾಲಯ 2ಜಿ ಸ್ಪೆಕ್ಟ್ರಂ 'ರೇಡಿಯೋ ತರಂಗಾಂತರ'ಗಳನ್ನು 2008ರಲ್ಲಿ 2001ರ ಬೆಲೆಗೆ 'ಮೊದಲು ಬಂದವರಿಗೆ ಆದ್ಯತೆ" ಎಂಬ ಆಧಾರದಲ್ಲಿ ಮಂಜೂರು ಮಾಡಿದ್ದು ಹರಾಜು ಪ್ರಕ್ರಿಯೆಯ ನಿಯಮಗಳನ್ನು ಮುರಿದಿತ್ತು. ನಿಬಂಧನೆಗಳನ್ನು ಗಾಳಿಗೆ ತೂರಿ 12 ಕಂಪೆನಿಗಳಿಗೆ 85ಕ್ಕೂ ಹೆಚ್ಚು ಪರವಾನಿಗೆಗಳನ್ನು ನೀಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಆದರೆ, 2010ರಲ್ಲಿ 3ಜಿ ತರಂಗಗಳ ಹರಾಜಿನಿಂದ 67.718.95 ಕೋಟಿ ವರಮಾನ ದೊರೆತಿದೆ.2ಜಿ ಮಂಜೂರಾತಿಯಿಂದ 1.70 ಲಕ್ಷ ಕೋಟಿ ನಷ್ಟವಾಗಿದೆ. ಉಳಿದ 36,700 ಸಾವಿರ ಕೋಟಿ ನಷ್ಟ ಗುತ್ತಿಗೆ ಮಿತಿಗಳನ್ನು ಮೀರಿ ಹಾಲಿ ಒಂಬತ್ತು ಸಂಸ್ಥೆಗಳಿಗೆ ನಿಗದಿ ಮಾಡಿರುವುದರಿಂದ ಸಂಭವಿಸಿದೆ ಎಂದು ವರದಿ ಹೇಳಿದೆ. ವರದಿ ಪ್ರತಿಯನ್ನು ಹಣಕಾಸು ಸಚಿವಾಲಯ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.

ಸಿಎಜಿ ವರದಿ ಸರ್ಕಾರದ ಕೈ ಸೇರಿದ್ದು, ಈ ವಾರ ಸದನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಆದರೆ, ವರದಿಯಲ್ಲಿರುವ ಅಂಶಗಳನ್ನು ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಸಿಎಜಿ ವಿನೋದ ರೇ ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರ್ಶ್ ಫ್ಲ್ಯಾಟ್ ಹಗರಣದ ಅಶೋಕ್ ಚವಾಣ್, ಕಾಮನ್ ವೆಲ್ತ್ ಅವ್ಯವಹಾರದ ಸುರೇಶ್ ಕಲ್ಮಾಡಿ ತಲೆದಂಡವಾದ ನಂತರ ಕಾಂಗ್ರೆಸ್ ತನ್ನ ಅಪರೇಷನ್ ಕ್ಲೀನಿಂಗ್ ಪ್ರಕ್ರಿಯೆ ಮುಂದುವರೆಸಿದೆ. ಆದರೆ, ಎ.ರಾಜಾ ಅವರನ್ನು ಕೆಳಗಿಳಿಸಲು ಮಿತ್ರ ಪಕ್ಷ ಡಿಎಂಕೆಯ ಅನುಮತಿಗೆ ಯುಪಿಎ ಕಾದಿದೆ. ಈಗ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ನಿರ್ಧಾರದ ಮೇಲೆ ರಾಜಾ ಭವಿಷ್ಯ ನಿಂತಿದೆ.

English summary
Under pressure from Opposition and CAG report on the 2G spectrum scam, Congress leaves decision on Telecom Minister A Raja to ally DMK citing "coalition dharma".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X