ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

38 ಮಿಲಿಯನ್ ಡಾಲರ್ ಗೆ ಗುಲಾಬಿ ವಜ್ರ ಹರಾಜು?

By Mahesh
|
Google Oneindia Kannada News

Pink Diamond
ಜಿನೀವಾ, ನ.11: ಗುಲಾಬಿ ಬಣ್ಣದ ಅಪರೂಪದ ವಜ್ರವೊಂದರ ಹರಾಜು ಮುಂದಿನ ವಾರ ನಡೆಯಲಿದ್ದು, ವಿಶ್ವದಾಖಲೆ ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಸೊಥೆಬೀಸ್ ಹರಾಜು ಸಂಸ್ಥೆ ಹೇಳಿದೆ. ನ. 16 ರಂದು ಜಿನೀವಾದಲ್ಲಿ ಸುಮಾರು 550 ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವಜ್ರ ಸುಮಾರು 27 ರಿಂದ 38 ಮಿಲಿಯನ್ ಡಾಲರ್ ಗಳಿಗೆ ಬಿಕರಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.

ಅಮೆರಿಕದ ಆಭರಣ ವಹಿವಾಟುದರ ಹ್ಯಾರಿ ವಿನ್ ಸ್ಟನ್ 60 ವರ್ಷಗಳ ಹಿಂದೆ ಸಂಗ್ರಹಿಸಿದ್ದ ಈ ವಜ್ರ ವಿಶ್ವದಲ್ಲೆ ಅತಿ ವಿರಳ ಎನಿಸಿದ್ದು, ಗುಲಾಬಿ ಬಣ್ಣದಲ್ಲಿ ಪರಿಶುದ್ಧತೆಯಿಂದ ಕಣ್ಣು ಕೊರೈಸುತ್ತಿದೆ. 24.78 ಕ್ಯಾರಟ್ ತೂಕ ಹೊಂದಿರುವ ಈ ವಜ್ರವನ್ನು ಪ್ಲಾಟಿನಂ ಉಂಗುರವೊಂದಕ್ಕೆ ಅಳವಡಿಸಲಾಗಿದೆ.

2008ರ ಡಿಸೆಂಬರ್ ನಲ್ಲಿ ಕ್ರಿಸ್ಟೀಸ್ ಹರಾಜು ಸಂಸ್ಥೆ 17 ನೇ ಶತಮಾನದ ನೀಲಿ ವಜ್ರವೊಂದನ್ನು ಹರಾಜು ಹಾಕಿ 24.3 ದಶಲಕ್ಷ ಡಾಲರ್ ಗಳಿಗೆ ಮಾರಾಟವಾಗಿತ್ತು. 35.56 ಕ್ಯಾರಟ್ ನ ಈ ವಜ್ರವೇ ಅತಿ ದುಬಾರಿ ಬೆಲೆಗೆ ಮಾರಾಟವಾಗಿರುವ ವಜ್ರ ಎನಿಸಿದೆ.

English summary
A rare pink diamond of 24.78 Ct Diamond is favored to set a new world record next week, auction firm Sotheby"s ventured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X