ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ದಾವಣಗೆರೆಗೆ ಐರಾವತ ಎಸಿ ಬಸ್

By Mahesh
|
Google Oneindia Kannada News

Volvo bus service to Davanagere
ಬೆಂಗಳೂರು, ನ.10: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ಬೆಂಗಳೂರಿನಿಂದ ದಾವಣಗೆರೆಗೆ ನವೆಂಬರ್ 12ರಿಂದ ಐರಾವತ (ವೋಲ್ವೊ) ಬಸ್ ಸೇವೆಯನ್ನು ಆರಂಭಿಸಲಿದೆ. ಈಗಾಗಲೇ ಲಭ್ಯವಿರುವ ಬೆಂಗಳೂರು-ದಾವಣಗೆರೆ ವೋಲ್ವೊ ಬಸ್ ಸೇವೆಗೆ ಪೂರಕವಾಗಿ ಹೊಸ ಸೇವೆ ಆರಂಭವಾಗಲಿದೆ. ಇದರ ಜೊತೆಗೆ ಆಂಧ್ರಪ್ರದೇಶದ ನೆಲ್ಲೂರಿಗೂ ಹೊಸ ಬಸ್ ಸಂಪರ್ಕ ಕಲ್ಪಿಸಲಾಗಿದೆ.

ಈ ಬಸ್ ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು ತುಮಕೂರು-ಚಿತ್ರದುರ್ಗ ಮಾರ್ಗ ಸಾಗಿ ಸಂಜೆ 7 ಗಂಟೆಗೆ ದಾವಣಗೆರೆ ತಲುಪಲಿದೆ. ರಾತ್ರಿ 11.45ಕ್ಕೆ ದಾವಣಗೆರೆಯಿಂದ ಹೊರಡುವ ಬಸ್ ಬೆಳಗಿನ ಜಾವ 4.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆಂಧ್ರದ ವಿಜಯವಾಡಕ್ಕೆ ಇರುವ ಬಸ್ ಸೌಲಭ್ಯಕ್ಕೆ ಪೂರಕವಾಗಿ ನೆಲ್ಲೂರಿಗೂ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಬೆಂಗಳೂರು ಕೇಂದ್ರ ನಿಲ್ದಾಣದಿಂದ ರಾತ್ರಿ 8.30 ಕ್ಕೆ ಹೊರಟು ನೆಲ್ಲೂರನ್ನು 4.45ಕ್ಕೆ ತಲುಪಲಿದೆ. ನೆಲ್ಲೂರನ್ನು ರಾತ್ರಿ 8 ಗಂಟೆಗೆ ಬಿಟ್ಟು ಬೆಂಗಳೂರನ್ನು ಬೆಳಗಿನ ಜಾವ 4.45ಕ್ಕೆ ಸೇರಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸಲು 30 ದಿನಗಳವರೆಗೆ ಅವಕಾಶ . ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ www.ksrtc.in ನೋಡಬಹುದು ಎಂದು ಕೆ ಎಸ್ ಆರ್ ಟಿಸಿ ಪ್ರಕಟಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X