• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಮೆಟ್ರೋ ರೈಲು ಯೋಜನೆ ಇನ್ನಷ್ಟು ವಿಸ್ತರಣೆ

By Mahesh
|

ಬೆಂಗಳೂರು, ನ.10: ಮೆಟ್ರೋ ರೈಲು ಯೋಜನೆಯ ಎರಡನೆ ಹಂತದ ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. ನಿಗದಿಯಾಗಿದ್ದ ವೆಚ್ಚ ಪರಿಷ್ಕೃತಗೊಂಡಿದ್ದು, 942 ಕೋಟಿ ರು ನಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ಮೆಟ್ರೋ ರೈಲು ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. 51.45 ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು ಐದು ಕಡೆ ಮೆಟ್ರೋ ರೈಲು ವಿಸ್ತರಣೆಯಿಂದ ನಗರದ ಪಶ್ಚಿಮ, ನೈರುತ್ಯ ಹಾಗೂ ಆಗ್ನೇಯ ಭಾಗಗಳಿಗೆ ಅನುಕೂಲವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ವಿಎಸ್ ಆಚಾರ್ಯ ತಿಳಿಸಿದರು.
ಎರಡನೇ ಹಂತದ ವಿಸ್ತರಣೆ ವಿವರ ಇಂತಿದೆ:

* ಯೋಜನಾ ವೆಚ್ಚ: 14, 000 ಕೋಟಿ ರು.

* ಮೈಸೂರು ರಸ್ತೆ ಟರ್ಮಿನಲ್ ನಿಂದ ಕೆಂಗೇರಿ(7.7 ಕಿ.ಮೀ)

* ಬೈಯಪ್ಪನಹಳ್ಳಿಯಿಂದ ಐಟಿಪಿಎಲ್ (11.6 ಕಿ.ಮೀ)

* ಹೆಸರಘಟ್ಟ ಕ್ರಾಸ್ ನಿಂದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ( 4.2 ಕಿ.ಮೀ)

* ಪುಟ್ಟೇನಹಳ್ಳಿಯಿಂದ ಅಂಜನಾಪುರ ( 6.7ಕಿ.ಮೀ)

* ಐಐಎಂ, ಬನ್ನೇರುಘಟ್ಟ ರಸ್ತೆಯಿಂದ ನಾಗಾವಾರ (26.1 ಕಿ.ಮೀ)

ಮೆಟ್ರೋ ಎರಡನೇ ಹಂತದ ಕಾಮಗಾರಿಯ ಯೋಜನಾ ವೆಚ್ಚ 14 ಸಾವಿರ ಕೋಟಿ ರುಗಳಾಗಿದೆ. ಇದರಲ್ಲಿ 5,453 ಕೋಟಿ ರು ಗಳನ್ನು ರಾಜ್ಯ ಸರ್ಕಾರ ನೀಡಲಿದೆ. ಮೊದಲ ಹಂತದ ಜೊತೆ ಜೊತೆಗೆ ಎರಡನೇ ಹಂತದ ಕಾಮಗಾರಿ ಕೂಡಾ ನಡೆಯಲಿದೆ ಎಂದು ಆಚಾರ್ಯ ಹೇಳಿದರು.


ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Namma Metro also known as Bangalore Metro is the under-construction mass-transit rail system for the city of Bangalore, India. The agency responsible for its implementation is the Bangalore Metro Rail Corporation Ltd (BMRCL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more