ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿಗೂ ಅಂಟಿದ ಬಿಜೆಪಿ ಭಿನ್ನಮತ ವ್ಯಾಧಿ?

By Mahesh
|
Google Oneindia Kannada News

Mayor SK Nataraj
ಬೆಂಗಳೂರು, ನ. 10 : ಹತ್ತು ಹಲವು ಸಮಸ್ಯೆಗಳಿಂದ ಮುಕ್ತಗೊಂಡು ಇತ್ತೀಚಿಗೆ ರಚನೆಗೊಂಡ ಬೃಹತ್ ಬೆಂಗಳೂರು ಮಹಾನಗರಪಾಲಿಕೆ(ಬಿಬಿಎಂಪಿ) ಸ್ಥಾಯಿಸಮಿತಿ ಸದಸ್ಯತ್ವಕ್ಕೆ ಬಿಜೆಪಿಯ ನಾಲ್ವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಮಂಗಳವಾರ ಹರಡಿತ್ತು. ಅಕ್ಟೋಬರ್ 30 ರಂದು ರಚನೆಗೊಂಡಿದ್ದ ಸಮಿತಿಯ ಸದಸ್ಯರಲ್ಲಿ ಅಸಮಾಧಾನದ ಹೊಗೆಯಾಡಿದ್ದು ನಿರೀಕ್ಷಿಸಿದ ಸಮಿತಿ ಸದಸ್ಯತ್ವ ಲಭಿಸಿಲ್ಲದಿದ್ದರಿಂದ ನಾಲ್ವರು ಬಿಜೆಪಿ ಕಾರ್ಪೊರೇಟರ್ ಗಳು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ರಾಜೀನಾಮೆ ನೀಡಿದವರಲ್ಲಿ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯ ಹಾಗೂ ಕೆಂಪೇಗೌಡ ವಾರ್ಡ್ ಕಾರ್ಪೊರೇಟರ್ ವೈ ಕೆ ಅಶ್ವಥ್, ತೋಟಗಾರಿಕೆ ಸ್ಥಾಯಿ ಸಮಿತಿ ಸದಸ್ಯ, ಚೌಡೇಶ್ವರಿ ವಾರ್ಡ್ ಸದಸ್ಯೆ ಕೆ ಯಶೋಧ, ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ಹಾಗೂ ಅಟ್ಟೂರು ವಾರ್ಡ್ ಸದಸ್ಯೆ ಗೀತ ಶಶಿಕುಮಾರ್, ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯ ಯಲಹಂಕ ಉಪನಗರ ವಾರ್ಡ್ ಸದಸ್ಯ ಎಂ ಮುನಿರಾಜು ಪ್ರಮುಖರಾಗಿದ್ದಾರೆ.

ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ನಾಲ್ವರು ರಾಜೀನಾಮೆ ನೀಡಿದ್ದಾರೆನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಪಕ್ಷದ ಸದಸ್ಯರಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲಾ ಸದಸ್ಯರು ಪಕ್ಷದ ನೀತಿ ನಿಯಮಗಳಿಗೆ ಬದ್ಧರಾಗಿದ್ದಾರೆ. ಯಾವುದೇ ಸದಸ್ಯರ ರಾಜೀನಾಮೆ ಪತ್ರ ನನಗಾಗಲಿ ಅಥವಾ ಪಕ್ಷದ ನಾಯಕರಿಗಾಗಲಿ ತಲುಪಿಲ್ಲ ಎಂದು ಮೇಯರ್ ಎಸ ಕೆ ನಟರಾಜ್ ಸ್ಪಷ್ಟೀಕರಣ ನೀಡಿದ್ದಾರೆ.

ಯಲಹಂಕ ವ್ಯಾಪ್ತಿಯ ಕಾರ್ಪೋರೇಟರ್ ಗಳು ಯಾರೂ ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನಾಡಿಲ್ಲ. ಇದು ನಮ್ಮ ಗಮನಕ್ಕೂ ಬಂದಿಲ್ಲ.ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಕೂಡಾ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X