• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಳಿಗಾಲದ ಅಧಿವೇಶನದಲ್ಲಿ ಹಗರಣಗಳ ಬಿಸಿ

By Mahesh
|

ನವದೆಹಲಿ, ನ.9: ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕಾಮನ್‌ವೆಲ್ತ್, 2ಜಿ, 'ಆದರ್ಶ" ಅವ್ಯವಹಾರ, ಕಾಶ್ಮೀರ ವಿಷಯ ಸೇರಿದಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧವಾಗಿವೆ. ಇನ್ನೊಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜೀನಾಮೆ ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ ಸುರೇಶ್ ಕಲ್ಮಾಡಿ ಅವರ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದಾರೆ.

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋಟ್ಯಂತರ ರುಪಾಯಿ ಹಗರಣದ ಆರೋಪದಿಂದಾಗಿ ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದವು. ಕಲ್ಮಾಡಿ ನೀಡಿದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಮಂಗಳವಾರ ತಿಳಿಸಿದ್ದಾರೆ.

ಚರ್ಚೆ ವಿಷಯಗಳು: ಚಳಿಗಾಲ ಅಧಿವೇಶನಕ್ಕೂ ಮುನ್ನಾದಿನ ಅಮೆರಿಕ ಅಧ್ಯಕ್ಷ ಒಬಾಮ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ, ಕಾಮನ್‌ವೆಲ್ತ್, ಆದರ್ಶ, 2ಜಿ ಸ್ಪೆಕ್ಟ್ರಮ್ ಸೇರಿದಂತೆ ಹಲವು ಹಗರಣಗಳನ್ನು ಮೊದಲ ದಿನವೇ ಪ್ರಸ್ತಾಪಿಸಿ ಸರಕಾರವನ್ನು ಮುಜುಗರಕ್ಕೀಡುಮಾಡಲು ವಿರೋಧ ಪಕ್ಷಗಳು ಸಿದ್ಧವಾಗಿವೆ.

ಈ ಹಿನ್ನೆಲೆಯಲ್ಲಿಯೇ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಸರ್ವಪಕ್ಷಗಳ ನಾಯಕರ ಸಭೆಯನ್ನು ಕರೆದು ಅಧಿವೇಶನದ ಮೊದಲ ದಿನ ಕಲಾಪ ಸರಾಗವಾಗಿ ನಡೆಯುವಂತೆ ಸಹಕರಿಸಲು ಮಾಡಿಕೊಂಡ ಮನವಿ ವಿಫಲವಾಗಿದೆ.

ಅಂಗೀಕಾರಕ್ಕೆ ಕಾದಿರುವ ವಿಧೇಯಕಗಳು: ಡಿ.13ರ ವರೆಗೂ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕೆಲ ಪ್ರಮುಖ ವಿಧೇಯಕಗಳನ್ನು ಸದನ ಮುಂದಿಡಲು ಯುಪಿಎ ಸರ್ಕಾರ ಸಜ್ಜಾಗಿದೆ. ಅವುಗಳಲ್ಲಿ

ಮಹಿಳಾ ಮೀಸಲಾತಿ ವಿಧೇಯಕ 2008(108 ತಿದ್ದುಪಡಿ):- ಲೋಕಸಭೆ ಹಾಗೂ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿರುವಂತೆ ತಿದ್ದುಪಡಿ ತರಲಾಗಿದೆ.

ಭೂ ಕಬಳಿಕೆ (ತಿದ್ದುಪಡಿ)ವಿಧೇಯಕ 2010: ಗಣಿಗಾರಿಕೆ ಹೆಸರಿನಲ್ಲಿ ಮನೆ ಕಳೆದುಕೊಂಡ ನಿರ್ಗತಿಕರಿಗೆ(ಮುಖ್ಯವಾಗಿ ಬುಡಕಟ್ಟು ಜನಾಂಗ) ಪುನರ್ವಸತಿ ಕಲ್ಪಿಸುವ ಬಗ್ಗೆ ಮಸೂದೆ ಮಂಡನೆ.

ಅಭಿವೃದ್ಧಿಗಾಗಿ ಭೂ ಕಬಳಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು. ಸಾರ್ವಜನಿಕರ ಹಿತಕ್ಕಾಗಿ ಭೂ ಸ್ವಾದೀನಕ್ಕೆ ಒಪ್ಪಿಗೆ ಸೂಚಿಸುವುದು ಇವೇ ಮುಂತಾದ ತಿದ್ದುಪಡಿಗಳನ್ನು 1894ರ ಭೂ ಸ್ವಾಧೀನ ಕಾಯಿದೆಗೆ ಅನ್ವಯವಾಗುವಂತೆ ಮಾಡಲಾಗಿದೆ.

ಗಣಿ ಹಾಗೂ ಖನಿಜ ಕಾಯಿದೆ(ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ) 2009: ಗಣಿಗಾರಿಕೆಗೆ ಲೈಸನ್ ಒದಗಿಸುವುದು, ಲೈಸನ್ ರದ್ದು ಪಡಿಸುವುದು ಅಥವಾ ಭೋಗ್ಯಕ್ಕೆ ಇರುವ ಗಣಿಗಾರಿಕೆ ಭೂಮಿಯನ್ನು ಸರ್ಕಾರ ನೀಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.

ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯಿದೆ, 2010 : ಶಸ್ತ್ರಾಸ್ತ್ರ ಹೊಂದಲು ಬೇಕಾದ ಅಗತ್ಯ ಲೈಸನ್ಸ್ ನೀಡಿಕೆಗೆ ನಿಯಮಾವಳಿಗಳನ್ನು ರೂಪಿಸುವುದು ಇದರ ಪ್ರಮುಖ ಅಂಶವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more