ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಕ್ರೀದ್ ಬಕ್ರಾಗಳನ್ನು ಆರೆಸ್ಸೆಸ್ ನಿಂದ ರಕ್ಷಿಸಿ

By Mahesh
|
Google Oneindia Kannada News

Save Bakrid Bakras from RSS: Muslim Leaders
ಬೆಂಗಳೂರು, ನ.9: ಮುಂದಿನ ವಾರ (ನ.17) ನಡೆಯಲಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಸಂಘ-ಪರಿವಾರದವರ ಭೀತಿ ಎದುರಾಗಿದೆ. ಗೋಹತ್ಯೆ ನಿಷೇಧ ಹಿನ್ನೆಲೆಯಲ್ಲಿ ಜಾನುವಾರು ಸಾಗಾಟಕ್ಕೆ ಅವಕಾಶ ಕಲ್ಪಿಸದೆ ಭೀತಿ ಹುಟ್ಟಿಸುವ ಸಾಧ್ಯತೆಗಳಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಬೀಫ್ ಮತ್ತು ಮಟನ್ ವ್ಯಾಪಾರಿಗಳ ಪ್ರತಿನಿಧಿಗಳನ್ನೊಳಗೊಂಡ ಅಖಿಲ ಭಾರತ ಜಮಾತ್-ಉಲ್-ಖುರೇಷಿ ಸಂಘಟನೆಯ ರಾಜ್ಯ ಘಟಕ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಈ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ತು, ಆರೆಸ್ಸೆಸ್ ಮತ್ತಿತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಡ್ಡಿಯುಂಟು ಮಾಡುತ್ತ ಬಂದಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ನೀಡಿದ ಮನವಿಯಲ್ಲಿ ಜಮಾತ್‌ನ ಸಂಚಾಲಕ ಬಿ ಎಂ ಯೂಸುಫ್ ಖುರೇಷಿ ಹೇಳಿದ್ದಾರೆ.

'ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೊಂಚು ಹಾಕುತ್ತ, ನಮ್ಮ ಪ್ರಾಣಿಗಳನ್ನು ಕಸಿದುಕೊಳ್ಳುತ್ತಾರೆ. ಸಿಬ್ಬಂದಿಗಳಿಗೆ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಅವರು ನಮ್ಮ ಬಳಿ ಇರುವ ಅಧಿಕೃತ ಪರವಾನಿಗೆಯನ್ನೂ ಲೆಕ್ಕಿಸುವುದಿಲ್ಲ' ಎಂದು ಖುರೇಷಿ ದೂರಿದ್ದಾರೆ.

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಕನಿಷ್ಠ ನಾಲ್ಕು ದಿನ ಜಾನುವಾರುಗಳನ್ನು ಕಡಿಯಲಾಗುತ್ತದೆ. ಈ ಕಾರಣದಿಂದಲೇ ಸಮುದಾಯದ ಸದಸ್ಯರು ರಾಜ್ಯದೆಲ್ಲೆಡೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದು, ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಖುರೇಷಿ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X