ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ನಶೆ ಏರಿಸುತ್ತಿರುವ ಆಫ್ರಿಕನ್ನರು

By Mahesh
|
Google Oneindia Kannada News

African youth student held in Bangalore for selling cocaine
ಬೆಂಗಳೂರು, ನ.9: ಮಾದಕ ವಸ್ತು ಮಾರಾಟ ಜಾಲಕ್ಕೆ ಬೆಂಗಳೂರು ಹೇಳಿ ಮಾಡಿಸಿದಂಥ ಜಾಗ. ಇಲ್ಲಿಗೆ ವಿದ್ಯಾಭ್ಯಾಸದ ನೆಪದಲ್ಲಿ ಬಂದು ಸೇರಿ, ಕೊಕೇನ್, ಹೆರಾಯಿನ್, ಗಾಂಜಾ, ಅಫೀಮು ಅಕ್ರಮವಾಗಿ ಮಾರಾಟ ಮಾಡುವುದು ನಮ್ಮ ಕೆಲಸ ಎನ್ನುತ್ತಾನೆ ಪಶ್ಚಿಮ ಆಫ್ರಿಕಾದ ಪ್ರಜೆ. ಮಾದಕ ದ್ರವ್ಯಗಳ ಮಾರಾಟ ಕೇಂದ್ರವಾಗಿ ವಿಶ್ವ ಭೂಪಟದಲ್ಲಿ ಇಂದು ಬೆಂಗಳೂರು ರಾರಾಜಿಸುವಂತೆ ಮಾಡುವಲ್ಲಿ ಆಫ್ರಿಕನ್ನರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಅಫ್ರಿಕನ್ ಪ್ರಜೆ ಬಳಿ ಸುಮಾರು 250 ಗ್ರಾಂ ಕೊಕೇನ್ ಸಿಕ್ಕಿದ್ದು ಇದರ ಬೆಲೆ ಸುಮಾರು 25 ಲಕ್ಷ ರು ಎನ್ನುತ್ತದೆ ಪೊಲೀಸ್ ಮೂಲಗಳು.

ಕಳೆದ ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಂಡು ಬಂದಿರುವ ಎರಡನೇ ಪ್ರಕರಣ ಇದಾಗಿದೆ. ಕೆಲ ತಿಂಗಳುಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ವೇಷಧಾರಿಗಳಾದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿ 40 ಲಕ್ಷ ರು ಬೆಲೆಯ ಮಾಲ್ ಅನ್ನು ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ವಶಪಡಿಸಿಕೊಂಡಿತ್ತು. ಈಗ ಹೆಚ್ ಬಿಆರ್ ಬಡಾವಣೆಯಲ್ಲಿ ಸಿಕ್ಕಿಬಿದ್ದ ಪಶ್ಚಿಮ ಆಫ್ರಿಕಾದ ಐವರಿಕೋಸ್ಟ್ ನಿವಾಸಿ ಜಾನ್ ಅಬ್ದುಲ್ ಕರೀಂ ಕಾಲಿಬಲೈ ಎಂಬ ಆರೋಪಿ ಬಳಿ ಇದ್ದ 49,500 ರು ಗಳನ್ನು ಕೂಡಾ ಬಾಣಸವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಂತೆ ಸೋಗು: ಮಿರಾಂಡಾ ಕಾಲೇಜಿನಲ್ಲಿ 3 ನೇ ವರ್ಷದ ಬಿಬಿಎಂ ಓದುತ್ತಿರುವ ಕಾಲಿಬಲೈ, ನೈಜೀರಿಯಾ ದೇಶದ ಏಜೆಂಟ್ ಹಾಗೂ ಗೋವಾದ ಡೀಲರ್ ಜೊತೆ ಸಂಪರ್ಕ ಹೊಂದಿ, ಬೆಂಗಳೂರಿನಲ್ಲಿ ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದ. ಇಲ್ಲಿ ಐಟಿ ಬಿಟಿ ಉದ್ಯೋಗಿಗಳಿಗೆ, ಪಬ್ , ರೆಸ್ಟೋರೆಂಟ್, ಬಾರ್, ಕಾಲೆಜು ವಿದ್ಯಾರ್ಥಿಗಳಿಗೆ ಕೊಕೇನ್ ಸರಬರಾಜು ಮಾಡುತ್ತಿದ್ದ ಎಂದು ಡಿಸಿಪಿ ಕೃಷ್ಣಂರಾಜು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X