ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಭಾಷಣಕ್ಕೆ ಸಜ್ಜುಗೊಂಡ ಸಂಸತ್ತು

By Mahesh
|
Google Oneindia Kannada News

Barack Obama to address Parliament
ನವದೆಹಲಿ, ನ.8: ರಾಷ್ಟ್ರಪತಿ ಭವನದಲ್ಲಿ ಒಬಾಮ ದಂಪತಿಗಳಿಗೆ ಅದ್ಧೂರಿಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಒಬಾಮ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ರಾಷ್ಟ್ರಪತಿ ಜೊತೆಗೆ ಅವರ ಪತಿ ದೇವಿಸಿಂಗ್ ಶೇಖಾವತ್ ಕೂಡ ಇದ್ದರು. ಪ್ರಧಾನಿ ಮನಮೋಹನ್ ಸಿಂಗ್ ದಂಪತಿ ಹಾಗೂ ಕೇಂದ್ರ ಸಂಪುಟದ ಹಲವು ಸಚಿವರು ಇದ್ದರು. ನಂತರ ಹೈದರಾಬಾದ್ ಹೌಸ್ ನಲ್ಲಿ ಮನಮೋಹನ್ ಸಿಂಗ್ ಹಾಗೂ ಒಬಾಮಾ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಸಂಸತ್ ನಲ್ಲಿ ಭಾಷಣ: ಅಮೆರಿಕದ ಅಧ್ಯಕ್ಷರು ಭಾರತದ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಭಾಷಣವು 18 ರಿಂದ 20 ನಿಮಿಷಗಳ ಅವಧಿಯದಾಗಿರುತ್ತದೆ. ಚಾರಿತ್ರಿಕ ಸೆಂಟ್ರಲ್ ಹಾಲ್‌ನಲ್ಲಿ ಭಾಷಣ ಮಾಡಲಿರುವ ಒಬಾಮರಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಅಧಿಕಾರಿಗಳು ಸರ್ವ ಸಿದ್ಧತೆ ನಡೆಸಿದ್ದಾರೆ. ಅವರು 20 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ತನ್ನ ಭಾಷಣ ಮುಗಿಸಲಿದ್ದಾರೆಂದು ಸಂಸತ್ತಿನ ಮೂಲಗಳು ತಿಳಿಸಿವೆ.

ಟೆಲಿಪ್ರಾಮ್ಟರ್ ಬಳಕೆ : ಒಬಾಮಾ ಭಾಷಣಕ್ಕೆ ಒಂದನ್ನು ಬಳಸಲಿದ್ದಾರೆ. ಈ ಯಂತ್ರವು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಬಾರಿಗೆ ಬಳಕೆಯಾಗಲಿದೆ. ಟೆಲಿಪ್ರಾಂಮ್ಟರ್ ಯಂತ್ರವು ಪುಸ್ತಕದ ಗಾತ್ರದ ಗಾಜಿನ ಹಲಗೆಯಂತಿದ್ದು, ಅದನ್ನು ವೇದಿಕೆಯ ಎದುರು ಗೂಟಕ್ಕೆ ಅಳವಡಿಸಲಾಗುತ್ತವೆ. ಅದರಲ್ಲಿ ಪೂರ್ವ ನಿಗದಿತ ಭಾಷಣದ ಮುಖ್ಯಾಂಶಗಳು ಮೂಡಿ ಬಂದು ಭಾಷಣಕಾರನಿಗೆ ಗೋಚರವಾಗುತ್ತವೆ.

ಸಂಜೆ 5:25ಕ್ಕೆ ಸಂಸತ್ತಿಗೆ ಆಗಮಿಸುವ ಒಬಾಮ 5:38ಕ್ಕೆ ಭಾಷಣ ಆರಂಭಿಸಲಿದ್ದಾರೆ. ಒಟ್ಟಾರೆ ಅವರಲ್ಲಿ ಒಂದು ತಾಸಿಗೂ ಕಡಿಮೆ ಅವಧಿ ಇರುತ್ತಾರೆ. ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಅನ್ಸಾರಿ, ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಸ್ಪೀಕರ್ ಮೀರಾ ಧನ್ಯವಾದ ಸಲ್ಲಿಸಲಿದ್ದಾರೆ. ಒಬಾಮ ಸಂಸತ್ತಿನ ಭೇಟಿ ಪುಸ್ತಕ 'ಗೋಲ್ಡನ್ ಬುಕ್"ಗೆ ಸಹಿ ಹಾಕಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X