ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳವಳ್ಳಿಯಲ್ಲಿ ಭಾಗ್ಯಲಕ್ಷ್ಮಿಗಳಿಗೆ ಜೆಡಿಎಸ್ ತಡೆ

By Mahesh
|
Google Oneindia Kannada News

JD(S), BJP lock horns over saree politics
ಮಂಡ್ಯ, ನ.8: ನಗರದ ಸರ್. ಎಂ. ವಿ. ಕ್ರೀಡಾಂಗಣ ದಲ್ಲಿ ಭಾಗ್ಯಲಕ್ಷ್ಮಿ ತಾಯಂದಿರ ಸಮಾವೇಶ ನಡೆಸಲು ಜಿಲ್ಲಾಡಳಿತ ಸರ್ವಸಿದ್ಧತೆಯನ್ನು ಕೈಗೊಂಡಿದೆ. ಆದರೆ, ಫಲಾನುಭವಿಗಳು ಜಿಲ್ಲೆಯನ್ನು ಪ್ರವೇಶಿಸದಂತೆ ಎಲ್ಲೆಡೆ ಜೆಡಿಎಸ್ ಕಾರ್ಯಕರ್ತರು ತಡೆ ಒಡ್ಡಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದು, ಈಗಾಗಲೇ ಬಿಜೆಪಿ ಸೀರೆ ಹಂಚಿಕೆ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಿಷೇಧಾಜ್ಞೆ ನಡುವೆಯೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಳವಳ್ಳಿ, ಶ್ರೀರಂಗಪಟ್ಟಣ, ಅರಕೆರೆ ಸೇರಿದಂತೆ ಹಲವೆಡೆಗಳಿಂದ ಮಂಡ್ಯದ ಮೈದಾನದೆಡೆಗೆ ಸಾಗಿದ್ದ ಫಲಾನುಭವಿಗಳಿದ್ದ ಬಸ್ ಗಳನ್ನು ಜೆಡಿಎಸ್ ಕಾರ್ಯಕರ್ತರು ತಡೆ ಒಡ್ಡಿ, ವಾಪಾಸ್ ಕಳಿಸುವ ಪ್ರಯತ್ನ ನಡೆಸಿದ್ದಾರೆ.

15 ಸಾವಿರ ಜನರ ನಿರೀಕ್ಷೆ: ಮಂಡ್ಯ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ 39 ಸಾವಿರ ಫಲಾನುಭವಿಗಳಿದ್ದು, ಆ ಪೈಕಿ ನಾಳಿನ ಕಾರ್ಯಕ್ರಮದಲ್ಲಿ 15 ಸಾವಿರ ಫಲಾನುಭವಿಗಳಿಗೆ ಸೀರೆ ವಿತರಿಸುವ ಸಾಧ್ಯತೆಯಿದೆ. ಉಳಿದವರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾರ್ ಹೇಳಿದ್ದಾರೆ.

ಆರೋಗ್ಯ ಶಿಬಿರ: ಸಮಾವೇಶದ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಏರ್ಪಡಿಸಲಾಗಿದ್ದು, ತಾಯಂದಿರಿಗೆ ಊಟ ಹಾಗೂ ಮಕ್ಕಳಿಗೆ ಹಾಲಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ತಾಯಂದಿರನ್ನು ಕರೆತರಲು 200 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಜ್ಯಾತ್ಯಾತೀತ ಜನತಾದಳ ಕಾರ್ಯಕರ್ತರು ಸಮಾವೇಶ ಸುಗಮವಾಗಿ ನಡೆಯಲು ಸಹಕರಿಸಬೇಕೆಂದು ಮನವಿ ಮಾಡಿರುವ ಜಾರ್, ಜಿಲ್ಲೆ ಪ್ರತಿನಿಧಿಸುವ ಎಲ್ಲ್ಲ ಸಚಿವರು, ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದಾರೆ.

ಬಿಗಿ ಬಂದೋಬಸ್ತ್: ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಾಯಂದಿರನ್ನು ಕರೆತರುವ ಪ್ರತಿ ಬಸ್ಸಿಗೆ ಇಬ್ಬರು ಹೆಡ್‌ಕಾನ್ ಸ್ಟೇಬಲ್‌ಗಳನ್ನು ನೇಮಿಸಲಾಗಿದೆ. 25 ಮೊಬೈಲ್ ವ್ಯಾನ್‌ಗಳಲ್ಲಿ ಗಸ್ತು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಕೌಶಲೇಂದ್ರಕುವಾರ್ ಹೇಳಿದರು.

2000 ಪೊಲೀಸರು, 28 ಡಿಎಆರ್, 20 ಕೆಎಸ್‌ಆರ್‌ಪಿ ತುಕಡಿ, 600 ಹೆಡ್‌ಕಾನ್‌ಸ್ಟೇ ಬಲ್, 15 ಸಿ.ಪಿ.ಐ, 50 ಪಿಎಸ್ಸೈಗಳನ್ನು ನಿಯೋ ಜಿಸಲಾಗಿದೆ. ಅಗತ್ಯಬಿದ್ದರೆ ನೆರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿ ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ: ಭಾಗ್ಯಲಕ್ಷ್ಮಿತಾಯಂದಿರ ಸಮಾವೇಶದಲ್ಲಿ ಸೀರೆ ವಿತರಣೆ ವಿರೋಧಿಸಿ ಜೆಡಿಎಸ್ ಜಿಲ್ಲೆಯಾದ್ಯಂತ ರಸ್ತೆ ತಡೆ ನಡೆಸುವ ಬೆದರಿಕೆಯನ್ನು ಹಾಕಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ.7ರಂದು ಮಧ್ಯರಾತ್ರಿಯಿಂದ ನ.8ರಂದು ಮಧ್ಯ ರಾತ್ರಿವರೆಗೆ ಜಿಲ್ಲಾದ್ಯಂತ ರಸ್ತೆ ತಡೆಯಂತಹ ಪ್ರತಿಭಟನೆಗಳನ್ನು ನಿಷೇಧಿಸಿ ಭಾರತೀಯ ದಂಡ ಸಂಹಿತೆ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಆದೇಶ ಹೊರಡಿಸಿದ್ದಾರೆ.

ಸಂಚಾರ ವ್ಯವಸ್ಥೆ: ದ್ವಿಮುಖ ಸಂಚಾರ ಭಾಗ್ಯಲಕ್ಷ್ಮಿಯೋಜನೆಯಡಿ ಆರೋಗ್ಯ ತಪಾಸಣೆ ಮತ್ತು ಸೀರೆ ವಿತರಣೆ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಸಂಜಯ ಚಿತ್ರಮಂದಿರದಿಂದ ಡಿಡಿಪಿಐ ಕಚೇರಿವರೆಗೆ ಆರ್.ಪಿ. ರಸ್ತೆ ಮತ್ತು ವಿನೋಭ ರಸ್ತೆಯಲ್ಲಿನ ಏಕಮುಖ ಸಂಚಾರ ವ್ಯವಸ್ಥೆಯನ್ನು ನ.7ರಿಂದ 8ರ ಸಂಜೆ 6 ಗಂಟೆಯವರೆಗೆ ಮಾತ್ರ ದ್ವಿಮುಖ ಸಂಚಾರಕ್ಕೆ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದ್ದು, ನ.8ರಂದು ಸಂಜೆ 6 ಗಂಟೆಯ ನಂತರ ಏಕಮುಖ ಸಂಚಾರ ವ್ಯವಸ್ಥೆ ಮುಂದು ವರಿಯುತ್ತದೆ ಎಂದು ಜಾಫರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X