For Daily Alerts
ದೀಪಾವಳಿ ಸಂಭ್ರಮಕ್ಕೆ ವರುಣನ ವಕ್ರದೃಷ್ಟಿ ಸಾಧ್ಯತೆ
ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ರಾಣೆಬೆನ್ನೂರಿನಲ್ಲಿ ಅಧಿಕ (10 ಸೆ.ಮೀ) ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆ ರಾಮಗಿರಿಯಲ್ಲಿ 7 ಸೆ.ಮೀ, ಅಜ್ಜಂಪುರ, ತುರುವೇಕೆರೆ, ಹರಪನಹಳ್ಳಿಯಲ್ಲಿ ತಲಾ 6 ಸೆ.ಮೀ ಮಳೆ ದಾಖಲಾಗಿದೆ. ಬಳ್ಳಾರಿ, ಗುಡಿಬಂಡೆಯಲ್ಲಿ ತಲಾ 5 ಸೆ.ಮೀ ಮಳೆಯಾಗಿದೆ.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಬ್ಬದ ಮುನ್ನಾ ದಿನ ಗುರುವಾರ ಧಾರಾಕಾರ ಮಳೆಯಾಗಿದೆ. ರಾಜ್ಯದಾದ್ಯಂತ ಸುರಿದ ಧಾರಾಕಾರ ಮಳೆ ಚಿತ್ರದುರ್ಗದಲ್ಲಿ 2 ಹಾಗೂ ಮೈಸೂರಿನಲ್ಲಿ ಒಬ್ಬರನ್ನು ಬಲಿತೆಗೆದುಕೊಂಡಿದೆ. ಕೆಲವೆಡೆಗಲ್ಲಿ ಮನೆಗಳಿಗೆ ಹಾಗೂ ಬೆಳೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಮಳೆ ಬೆಂಗಳೂರು ಚಿತ್ರದುರ್ಗ ದೀಪಾವಳಿ ರಾಣೆಬೆನ್ನೂರು ಕರಾವಳಿ ಹವಾಮಾನ ಬಳ್ಳಾರಿ rain bangalore chitradurga ranebennur bay of bengal deepavali festival
Story first published: Friday, November 5, 2010, 12:30 [IST]