ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಸಂಗೀತ ವಾದ್ಯಗಳ ಮೇಡಂ ತೌಸಡ್ಸ್

By Prasad
|
Google Oneindia Kannada News

Melody World : Wax museum in Mysore
ಮೈಸೂರು, ನ. 2 : ವಿಶ್ವ ಪ್ರವಾಸಿಗರ ಕೇಂದ್ರಬಿಂದುವಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ತನ್ನ ಗರಿಮೆಗೆ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡಿದೆ. ವಿಶ್ವದ ಮೊತ್ತಮೊದಲ ಸಂಗೀತ ವಾದ್ಯಗಳ ಮೇಣದ ಪ್ರತಿಮೆಗಳ ಮ್ಯೂಸಿಯಂ ಆರಂಭವಾಗಿದ್ದು, ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ.

ಸಂಗ್ರಹಾಲಯ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತ ವಾದ್ಯಗಳ ಮೇಣದ ಪ್ರತಿಮೆಗಳನ್ನು ಹೊಂದಿದೆ. ಮ್ಯೂಸಿಯಂನಲ್ಲಿ 110 ಸಂಗೀತ ಕಲಾವಿದರ ನೈಜಗಾತ್ರದ ಪ್ರತಿಮೆಗಳಿದ್ದರೆ, 300ಕ್ಕೂ ಹೆಚ್ಚು ವಾದ್ಯಗಳಿವೆ. ಲಂಡನ್ ನ ಮೇಡಂ ತೌಸಡ್ಸ್ ಮ್ಯೂಸಿಯಂ ನಂತರ 'ಮೆಲೊಡಿ ವರ್ಲ್ಡ್' ಎಂದು ಕರೆಯಲಾಗುವ ಈ ವಸ್ತುಸಂಗ್ರಹಾಲಯ ಜಗತ್ತಿನ ಅತಿದೊಡ್ಡ ಮ್ಯೂಸಿಯಂ. [ಚಿತ್ರಪಟ ನೋಡಿರಿ]

ಈ ವಸ್ತುಸಂಗ್ರಹಾಲಯದ ರೂವಾರಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞ 46 ವರ್ಷದ ಶ್ರೀಜಿ ಭಾಸ್ಕರನ್. ಭಾರತದಲ್ಲಿ ಮೊದಲ ಮೇಣದ ಮ್ಯೂಸಿಯಂ ಸ್ಥಾಪಿಸಿದ್ದು ಭಾಸ್ಕರನ್ ಅವರೇ, 2007ರಲ್ಲಿ ಊಟಿಯಲ್ಲಿ. ನಂತರ ಗೋವಾದಲ್ಲಿ 2008ರಲ್ಲಿ ಇನ್ನೊಂದು ವಸ್ತುಸಂಗ್ರಹಾಲಯ ಆರಂಭಿಸಿದರು.

ಮೊಲೊಡಿ ವರ್ಲ್ಡ್ ಜಗತ್ತಿನ ಅತಿ ದೊಡ್ಡ ಮತ್ತು ಅತ್ಯುತ್ತಮ ಮ್ಯೂಸಿಯಂಗಳಲ್ಲೊಂದು ಎಂದು ಭಾಸ್ಕರನ್ ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಬಗೆಯ ಸಂಗೀತ ವಾದ್ಯಗಳು ಇಲ್ಲಿವೆ. ಶತಮಾನಗಳ ಹಿಂದೆ ಬಳಸಲಾಗುತ್ತಿದ್ದ ಸಂಗೀತ ವಾದ್ಯಗಳು ಸಂಗ್ರಹಾಲಯಕ್ಕೆ ಕಳೆ ತಂದಿವೆ. ವಾದ್ಯಗಳನ್ನು ಉತ್ತರ ಭಾರತೀಯ ಶಾಸ್ತ್ರೀಯ ಸಂಗೀತ, ದಕ್ಷಿಣ ಭಾರತೀಯ ಸಂಗೀತ, ಪಂಜಾಬ್ ಭಾಂಗ್ರಾ, ಜಾಜ್ ಮತ್ತು ರಾಕ್, ಲ್ಯಾಟಿನ್ ಅಮೆರಿಕಾ ಮತ್ತು ಅರಬ್ ಎಂದು ವಿಭಿನ್ನ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಬಾಲ ಕಾರ್ಮಿಕರ ಬವಣೆ ಮತ್ತು ಬಡತನದ ಮೇಲೆ ಕೂಡ ಮ್ಯೂಸಿಯಂ ಬೆಳಕು ಚೆಲ್ಲುವುದು ಇಲ್ಲಿಯ ವಿಶೇಷ. [ಚಿತ್ರಪಟ ನೋಡಿರಿ]

ಪ್ರತಿ ಪ್ರತಿಮೆ ರೂಪಿಸುವಲ್ಲಿ ಭಾಸ್ಕರನ್ ಅವರು ಸಾಕಷ್ಟು ಬೆವರು ಮತ್ತು ಹಣ ಹರಿಸಿದ್ದಾರೆ. ಒಂದೊಂದು ಪ್ರತಿಮೆಗೆ 3ರಿಂದ 15 ಲಕ್ಷ ರು. ವ್ಯಯಿಸಲಾಗಿದೆ. ಅಂದಾಜು 50 ಕಿ.ಗ್ರಾಂ. ತೂಗುವ ಪ್ರತಿಮೆಗಳನ್ನು ತಯಾರಿಸಲು 2ರಿಂದ 4 ತಿಂಗಳು ಕಾಲ ತೆಗೆದುಕೊಳ್ಳುವುದಾಗಿ ಭಾಸ್ಕರನ್ ಹೇಳುತ್ತಾರೆ. ಪ್ರತಿಮೆ ತಯಾರಿಸುವಾದ ಕಂಪ್ಯೂಟರೈಸ್ಡ್ ಡಿಜಿಟಲ್ ಇಮೇಜಿಂಗ್ ತಂತ್ರಜ್ಞಾನವನ್ನು ಕೂಡ ಅವರು ಬಳಸಿದ್ದಾರೆ. ಈ ಮ್ಯೂಸಿಯಂ ನಗರದ ಸಿದ್ದಾರ್ಥನಗರದಲ್ಲಿದೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X