ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷೇತರ ಶಾಸಕರ ವಿಚಾರಣೆ ನ.8ಕ್ಕೆ ಮುಂದೂಡಿಕೆ

By Mrutyunjaya Kalmat
|
Google Oneindia Kannada News

Karnataka High Court
ಬೆಂಗಳೂರು, ನ. 2 : ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭೆಯ ಸ್ಪೀಕರ್ ಕೆಜಿ ಬೋಪಯ್ಯ ಅವರ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 8 ಕ್ಕೆ ಮುಂದೂಡಿದೆ.

ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಪೀಕರ್ ಕೆಜಿ ಬೋಪಯ್ಯ ಸೇರಿದಂತೆ ಪಕ್ಷೇತರ ಶಾಸಕರು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ಮತದಾರರಾದ ಕೊಪ್ಪಳದ ಯಮನಪ್ಪ, ಹಿರಿಯೂರಿನ ಎಸ್ ಎಂ ಬಸವರಾಜ್, ಮಳವಳ್ಳಿಯ ಕೆ ಎಲ್ ಲಿಂಗೇಗೌಡ, ಪಾವಗಡದ ಕೃಷ್ಣಾನಾಯಕ್ ಹಾಗೂ ಹೊಸದುರ್ಗದ ಟಿಟಿ ನಾಗರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ನವೆಂಬರ್ 4ರೊಳಗೆ ಈ ಸಂಬಂಧ ಉತ್ತರಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ಸರಕಾರದ ಪರವಾಗಿ ಸತ್ಯಪಾಲ್ ಸಿಂಗ್ ಮತ್ತು ಸೊಲೀ ಸೂರಾಬ್ಜಿ ವಾದ ಮಂಡಿಸಿದರೆ, ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಡಿ ಸುಧಾಕರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಮತ್ತು ಎಂಪಿ ನರೇಂದ್ರಸ್ವಾಮಿ ಪರವಾಗಿ ರವಿವರ್ಮಕುಮಾರ್ ವಾದ ಮಂಡಿಸುತ್ತಿದ್ದಾರೆ. ಎರಡು ಅರ್ಜಿಗಳ ವಿಚಾರಣೆಗಾಗಿ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣಪೀಠವನ್ನು ರಚಿಸಲಾಗಿದೆ. ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ನ್ಯಾ. ಎಎಸ್ ಬೋಪಣ್ಣ ಮತ್ತು ನ್ಯಾ. ಎಸ್ ಅಬ್ಧುಲ್ ನಜೀರ್ ಅವರಗಳು ಪೀಠದಲ್ಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X