ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೃಥ್ವಿರಾಜ್ ಚೌಹಾಣ್ ಮುಂದಿನ ಮಹಾ ಸಿಎಂ?

By Mrutyunjaya Kalmat
|
Google Oneindia Kannada News

Ashok Chavan
ನವದೆಹಲಿ ಅ. 31 : ಮಹಾರಾಷ್ಟ್ರದ ಯುಪಿಎ ಸರಕಾರಕ್ಕೆ ಮುಖಭಂಗವನ್ನುಂಟು ಮಾಡಿರುವ ಆದರ್ಶ್ ಹೌಸಿಂಗ್ ಸೊಸೈಟಿ ವಸತಿ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜೀನಾಮೆ ನೀಡಿದ ನಂತರ ಆ ಸ್ಥಾನಕ್ಕೆ ಕೇಂದ್ರ ಸಚಿವರಾದ ಪೃಥ್ವಿರಾಜ್ ಚೌಹಾಣ್ ಮತ್ತು ಮುಕುಲ್ ವಾಸ್ನಿಕ್ ಹೆಸರುಗಳು ಬಲವಾಗಿ ಕೇಳಿಬರತೊಡಗಿವೆ.

10, ಜನಪಥ್ ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರಿಗೆ ಜೊತೆ ಮಾತನಾಡಿದ ಚವಾಣ್ ಮಾತುಕತೆಯ ವಿವರಗಳನ್ನು ನೀಡಿದರು. ನನ್ನ ರಾಜೀನಾಮೆಯ ಕೊಡುಗೆಯನ್ನು ನಿಮಗೆ ನೀಡುತ್ತಿದ್ದೇನೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದನ್ನು ನಿಮಗೆ ಬಿಟ್ಟಿದ್ದೇನೆ ಹೀಗೆಂದು ತಾನು ಸೋನಿಯಾಗೆ ತಿಳಿಸಿದ್ದಾಗಿ ಅವರು ಸುದ್ದಿಗಾರರಿಗೆ ಹೇಳಿದರು.

ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಿ. ಚವಾಣ್‌ರ ಮಗನಾದ 51 ವರ್ಷದ ಅಶೋಕ್ ಚವಾಣ್, ಡಿಸೆಂಬರ್.8, 2008ರಲ್ಲಿ ಮಹಾರಾಷ್ಟ್ರದ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿದ್ದರು. 26/11ರ ಮುಂಬೈ ದಾಳಿ ಘಟನೆಯ ಹಿನ್ನೆಲೆಯಲ್ಲಿ ವಿಲಾಸ್ ರಾವ್ ದೇಶ ಮುಖ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಆ ಸ್ಥಾನಕ್ಕೆ ಚೌಹಾಣ್ ಆಯ್ಕೆಯಾಗಿದ್ದರು.

ಸೋನಿಯಾ-ಚೌಹಾಣ್ ಮಾತುಕತೆಯ ಬಳಿಕ ತಕ್ಷಣವೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸುದ್ದಿಗೋಷ್ಠಿಯನ್ನು ಕರೆದು, ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆಯ ಕೊಡುಗೆ ನೀಡಿರುವುದನ್ನು ದೃಢಪಡಿಸಿದರು. ಸಮಗ್ರ ವಿಷಯದ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ, ಪಕ್ಷದ ಹಿರಿಯ ನಾಯಕರಾದ ಪ್ರಣವ್ ಮುಖರ್ಜಿ ಹಾಗೂ ಎ.ಕೆ. ಆಂಟನಿಯವರಿಗೆ ಸೂಚನೆ ನೀಡಿದ್ದಾರೆಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X