ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ : ನ.10ರೊಳಗೆ ಹಿಂದೂಸಭಾದಿಂದ ಮೇಲ್ಮನವಿ

By Mrutyunjaya Kalmat
|
Google Oneindia Kannada News

Ayodhya Ram-Janmabhoomi-Babri masjid
ಲಖನೌ, ಅ. 30 : ಅಯೋಧ್ಯೆ ಭೂ ಮಾಲೀಕತ್ವ ವಿವಾದದ ಬಗ್ಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ನವೆಂಬರ್ 10ರೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಮೊಕದ್ದಮೆಯ ಪ್ರಧಾನ ಕಕ್ಷಿದಾರರಲ್ಲೊಂದಾದ ಅಖಿಲ ಭಾರತ ಹಿಂದೂ ಮಹಾಸಭಾ ಶನಿವಾರ ಹೇಳಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹಿಂದೂ ಮಹಾಸಭೆಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಕಮಲೇಶ್ ತಿವಾರಿ, ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾಸಭಾ ನವೆಂಬರ್ 10ರೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ ಹಾಗೂ ಮೊಕದ್ದಮೆಯನ್ನು ಮುನ್ನಡೆಸುವ ಅಧಿಕಾರವನ್ನು ಸಂಘಟನೆಯ ರಾಷ್ಟ್ರೀಯ ನಾಯಕ ದಿನೇಶ್ ಚಂದ್ರ ತ್ಯಾಗಿಗೆ ನೀಡಲಾಗಿದೆ ಎಂದು ತಿಳಿಸಿದರು.

ಅಲಹಾಬಾದ್ ಹೈಕೋರ್ಟ್‌ನಲ್ಲೂ ಅಯೋಧ್ಯೆ ಭೂವಿವಾದ ಮೊಕದ್ದಮೆಯನ್ನು ಸಂಘಟನೆಯ ಪರವಾಗಿ ತ್ಯಾಗಿಯೇ ವಾದಿಸಿದ್ದರಿಂದ, ಸುಪ್ರೀಂಕೋರ್ಟ್ ನಲ್ಲಿಯೂ ಅವರೇ ಅದನ್ನು ಮುನ್ನಡೆಸಬೇಕೆಂದು ಇತ್ತೀಚೆಗೆ ನಡೆದ ಮಹಾಸಭೆಯ ಸರ್ವ ಬಣಗಳ ಸಭೆಯಲ್ಲಿ ನಿರ್ಧರಿಸಲಾಯಿತೆಂದು ತಿವಾರಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X