ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯಕ್ಕೆ ಶಿಕಾರಿಪುರ ಜಿಲ್ಲಾ ಕೇಂದ್ರವಾಗಲ್ಲ: ರಾಘವೇಂದ್ರ

By Mahesh
|
Google Oneindia Kannada News

B Y Raghavendra
ಶಿವಮೊಗ್ಗ, ಅ.27: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸ್ವಕ್ಷೇತ್ರ ಶಿಕಾರಿಪುರ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ನವೆಂಬರ್ ತಿಂಗಳಲ್ಲಿ ಅಧಿಕೃತ ಘೋಷಣೆ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಸಂಸದ ಬಿ.ವೈ ರಾಘವೇಂದ್ರ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಹೊಸ ಜಿಲ್ಲಾಕೇಂದ್ರ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹರಿದು ಹಂಚಿ ಹೋದ ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ವಿಭಜಿಸಿ ಶಿರಸಿ ತಾಲೂಕಿನಲ್ಲಿರುವ ಬನವಾಸಿ ಒಳಗೊಂಡಂತೆ ಆನವಟ್ಟಿ ತಾಲೂಕು, ಶಿಕಾರಿಪುರ ತಾಲೂಕಿನಲ್ಲಿರುವ ಶಿರಾಳಕೊಪ್ಪ ಪ್ರತ್ಯೇಕಿಸಿ ಹೊಸ ತಾಲೂಕು ಹಾಗೂ ಹೊನ್ನಾಳ್ಳಿ ತಾಲೂಕಿನಲ್ಲಿರುವ ನ್ಯಾಮತಿಯನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚನೆ ಮಾಡುವ ಪ್ರಯತ್ನಗಳು ನಡೆದಿತ್ತು.

ಈ ಮೂರು ಹೊಸ ತಾಲೂಕುಗಳೊಂದಿಗೆ ಶಿಕಾರಿಪುರ, ಸೊರಬ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಒಳಗೊಂಡಂತೆ ಒಟ್ಟು ಎಂಟು ತಾಲೂಕುಗಳನ್ನು ಒಳಗೊಂಡ ಶಿಕಾರಿಪುರ ಜಿಲ್ಲೆ ರಚನೆಗೆ ನಕಾಶೆ ಸಿದ್ಧಪಡಿಸಲಾಗಿತ್ತು.

ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧದಲ್ಲಿ ಪೂರ್ವಭಾವಿ ತಯಾರಿಗಳು ಭರದಿಂದ ಸಾಗಿದ್ದು, ಯಡಿಯೂರಪ್ಪ ಅಂದು ಕೊಂಡಂತೆ ಎಲ್ಲ ಕಾರ್ಯಗಳು ನಡೆದರೆ ನವೆಂಬರ್ 1ರಂದು ಶಿಕಾರಿಪುರ ಜಿಲ್ಲೆಯ ಘೋಷಣೆಯಾಗಲಿದೆ ಎಂಬ ಸುದ್ದಿ ಸರ್ಕಾರಿ ಕಚೇರಿಗಳನ್ನು ದಾಟಿ ಮಾಧ್ಯಮಗಳಿಗೆ ಹಬ್ಬಿ ಜನರನ್ನು ತಲುಪಿತ್ತು.

ಪ್ರಸ್ತುತ ಶಿಕಾರಿಪುರ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರ ರಚನೆಗೆ ಅಗತ್ಯವಾದ ಹೊಸ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿವೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ಹೊಸ ಸರಕಾರಿ ಕಟ್ಟಡಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿವೆ.

ಒಟ್ಟಿನಲ್ಲಿ ಮಲೆನಾಡ ಹೆಬ್ಬಾಗಿಲು, ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡ ಶಿವಮೊಗ್ಗ ಎರಡನೇ ಬಾರಿ ವಿಭಜನೆಯ ಹಾದಿಯಲ್ಲಿದೆ. ಈ ಹಿಂದೆ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೊನ್ನಾಳ್ಳಿ ಮತ್ತು ಚೆನ್ನಗಿರಿ ತಾಲೂಕನ್ನು ವಿಭಜಿಸಿ ದಾವಣಗೆರೆ ಜಿಲ್ಲೆಯನ್ನು ರಚಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X