• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಜಿ ರೌಡಿ ಹಾಲಿ ಪುಢಾರಿ ಭೀಕರ ಹತ್ಯೆ

By Mahesh
|
Google Oneindia Kannada News
ಬೆಂಗಳೂರು, ಅ.28: ರೌಡಿ ಶೀಟರ್‌ ಕಮ್ ಬಿಜೆಪಿ ಕಾರ್ಯಕರ್ತ ವಜ್ರೇಶ್ ನನ್ನು ಯಲಹಂಕ ಉಪನಗರದಲ್ಲಿ ಹಾಡಹಗಲೇ ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಉಪನಗರದ ಎಸ್ ಬಿಐ ಜಂಕ್ಷನ್ ರಿಲೆಯನ್ಸ್‌ ಫ್ರೆಷ್‌ ಮುಂಭಾಗ ಶಾಸಕರ ಕಚೇರಿ ಸಮೀಪ ಬುಧವಾರ ಬೆಳಗ್ಗೆ 10.40 ರ ಸುಮಾರಿಗೆ ರಕ್ತದೋಕಳಿ ಚೆಲ್ಲಿದೆ. ಆಟೋ ಹಾಗೂ ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ವಜ್ರೇಶ್(30)ನ ಕೈ ಹಾಗೂ ತಲೆಯನ್ನು ತುಂಡರಿಸಿ ಪರಾರಿಯಾಗಿದೆ.

ಸಿನಿಮೀಯ ರೀತಿ ಘಟನೆ : ಎಂಎಲ್ ಎ ಎಸ್ ಆರ್ ವಿಶ್ವನಾಥ್ ಅವರ ಶಿಷ್ಯನಾಗಿದ್ದ ವಜ್ರೇಶ್ ಅವರ ಕಚೇರಿ ಹೊರಟ್ಟಿದ್ದ. ದಿನನಿತ್ಯದಂತೆ ಹೋಟೆಲ್‌ನಲ್ಲಿ ಉಪಹಾರ ಸೇವಿಸಿ ಶಾಸಕರ ಕಚೇರಿಯತ್ತ ಸಾಗುತ್ತಿದ್ದ ವಜ್ರೇಶ್ ಮೇಲೆ ಏಕಾಏಕಿ ದಾಳಿ ಮಾಡಿದ ಗುಂಪು ಸಿನಿಮೀಯ ರೀತಿಯಲ್ಲಿ ಕೊಚ್ಚಿ ಕೊಂದು ಹಾಕಿತು. ಘಟನೆಗೆ ಸಾಕ್ಷಿಯಾದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಜ್ರೇಶ್ ನನ್ನು ಕಂಡು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬೆರಳಚ್ಚು ತಂತ್ರಜ್ಞರು, ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವಿಕಾಂತೇಗೌಡ, ಎಸಿಪಿ ಪುಟ್ಟಸ್ವಾಮಿಗೌಡ ಅವರು ಪರಿಶೀಲನೆ ನಡೆಸಿದರು. ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮಾಜಿ ರೌಡಿ ಹಾಲಿ ಸಮಾಜ ಸೇವಕ : ಈ ಹಿಂದೆ ಯಲಹಂಕ ಉಪನಗರ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿದ್ದು ಇತ್ತೀಚೆಗೆ ಬಿಜೆಪಿ ಶಾಸಕರ ಜತೆ ಗುರುತಿಸಿಕೊಂಡಿದ್ದ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿದ್ದ. ಸಮಾಜಸೇವೆಗೆ ಇಳಿದು ರೌಡಿ ಜೀವನಕ್ಕೆ ಮಂಗಳ ಹಾಡಿದ್ದ.

ಮುಳುವಾದ ಅಂತರ್ಜಾತಿ ವಿವಾಹ?: ಮೂರು ತಿಂಗಳ ಹಿಂದೆಯಷ್ಟೇ ಶ್ವೇತಾ ಎಂಬುವವರನ್ನು ಅಂತರ್ಜಾತಿ ವಿವಾಹವಾಗಿದ್ದ. ಶ್ವೇತಾರ ತಂದೆ ರಾಷ್ಟ್ರೀಯ ಪಕ್ಷ ವೊಂದರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಯಲಹಂಕ ಮೂರನೇ ಹಂತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಯುವಕರ ಜತೆ ಜಗಳವಾಡಿದ್ದ. ಅಲ್ಲದೆ, ಯಲಹಂಕದ ಬುಲೆಟ್‌ ರವಿ ಹತ್ಯೆ ಮಾಡಿದ ಆರೋಪಿಗಳ ಜತೆ ವಜ್ರೇಶ್ ನಂಟು ಹೊಂದಿದ್ದ ಎಂದು ಶಂಕಿಸಲಾಗಿತ್ತು.

ಹಳೇ ವೈಷಮ್ಯ ಅಥವಾ ವ್ಯವಹಾರಿಕ ವಿಷಯ, ಅಂತರ್ಜಾತಿ ವಿವಾಹ ಕೊಲೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X