ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಿಂದ ಮೊಬೈಲ್ ನಂಬಲ್ ಪೋರ್ಟಬಿಲಿಟಿ ಜಾರಿಗೆ

By Mahesh
|
Google Oneindia Kannada News

ನವದೆಹಲಿ, ಅ.27 : ಗ್ರಾಹಕರು ತಮ್ಮ ಮೊಬೈಲ್‌ ಸೇವಾದಾರರನ್ನು ಬದಲಿಸಿದರೂ ಹಳೆದ ಮೊಬೈಲ್‌ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುವ ಮೊಬೈಲ್‌ ಸಂಖ್ಯೆ ವರ್ಗಾವಣೆ (MNP) ಸೇವೆಯು ನವೆಂಬರ್‌ 1 ಮೊದಲ ಬಾರಿಗೆ ಹರಿಯಾಣದಲ್ಲಿ ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಸಚಿವ ಎ. ರಾಜ ಹೇಳಿದ್ದಾರೆ. ಬಹುನಿರೀಕ್ಷಿತ ಈ ಸೌಲಭ್ಯ ಹಲವಾರು ಬಾರಿ ಜಾರಿಗೆ ಬರದೆ ಮುಂದೂಡಲ್ಪಟ್ಟಿತ್ತು.

ನವೆಂಬರ್‌ 1 ಬಳಿಕ ಎಂಎನ್‌ಪಿ ಸೇವೆಯು ಹಂತ ಹಂತವಾಗಿ ಜಾರಿಗೆ ಬರಲಿದೆ. ಹರಿಯಾಣದಲ್ಲಿ ಮೊದಲು ಸೇವೆಯನ್ನು ಉದ್ಘಾಟಿಸಲು ಸರ್ಕಾರ ಬಯಸಿದೆ ಎಂದು ರಾಜ ಅವರು ತಿಳಿಸಿದರು.

ಈ ಸೇವೆಯು ಮುಂಬರುವ ದಿನಗಳಲ್ಲಿ ವಿವಿಧ ಹಂತಗಳಲ್ಲಿ ದೇಶದ ವಿವಿಧ ಭಾಗಕ್ಕೂ ವಿಸ್ತರಣೆಗೊಳ್ಳುವ ನಿರೀಕ್ಷೆಯಿದೆ. ವಿವಿಧ ಕಾರಣಗಳಿಗಾಗಿ ಈ ಸೇವೆಯ ಅನುಷ್ಠಾನವು ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಸೇವೆಯ ಅನುಷ್ಠಾನ ಮುಂದೂಡಿಕೆಗೆ ಅಗತ್ಯ ಮೂಲಸೌಕರ್ಯಗಳ ಕೊರತೆ ಪ್ರಮುಖ ಕಾರಣವಾಗಿತ್ತು.

ಅಮೆರಿಕ ಮೂಲದ ಟೆಲ್‌ಕಾರ್ಡಿಯ ಹಾಗೂ ದೀಪಕ್‌ ತಲ್ವಾರ್‌ ಕನ್ಸಲ್ಟೆಂಟ್‌ ಪ್ರೈವೆಟ್‌ ಲಿಮಿಟೆಡ್‌ಗೆ 74:26 ಜಂಟಿ ಹೂಡಿಕೆ ಅನುಪಾತದನ್ವಯ ಸೇವೆಯ ಅನುಷ್ಠಾನಕ್ಕೆ ಸಿನಿವರ್ಸ್‌ ಟೆಕ್ನಾಲಜೀಸ್‌ ಹಾಗೂ ಎಂಎನ್‌ಪಿ ಇಂಟರ್‌ ಕನೆಕ್ಷನ್‌ ಟೆಲಿಕಾಂ ಸಲ್ಯೂಷನ್‌ಗೆ ದೂರಸಂಪರ್ಕ ಇಲಾಖೆ ಪರವಾನಿಗೆ ನೀಡಿತ್ತು.

ರಾಜ್ಯಕ್ಕೆ ಯಾವಾಗ?: ಮೊದಲಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೋಲ್ಕತ್ತಾ ನಗರದಲ್ಲಿ ಈ ಸೇವೆ ಕಲ್ಪಿಸಲಾಗುವುದು ಎಂದು ಟ್ರಾಯ್ (TRAI) ಹಾಗೂ ದೂರ ಸಂಪರ್ಕ ಇಲಾಖೆ (DoT) ಒಂದಲ್ಲ, ಎರಡಲ್ಲ, ಮೂರು ಬಾರಿ ಹೇಳಿದ್ದವು. ಆದರೆ ಮೊದಲಿಗೆ ಈ ಸೌಲಭ್ಯ ಹರಿಯಾಣಕ್ಕೆ ಸಿಕ್ಕಿದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X