ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೀಷ್ ಮೀಡಿಯಂ ಬೇಕೇ ಬೇಕು: ಇನ್ಫಿ ಮೂರ್ತಿ

By Mahesh
|
Google Oneindia Kannada News

NR Narayana Murthy
ಬೆಂಗಳೂರು, ಅ.27: ಗುಣಮಟ್ಟದ ಶಿಕ್ಷಣದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣದ ಅಗತ್ಯವಿದೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಎಲ್ಲಾ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಇಂದು ಉದಾರೀಕರಣ ನೀತಿಯಿಂದಾಗಿ ಆಂಗ್ಲ ಭಾಷೆ ವಾಸ್ತವಿಕವಾಗಿ ಹಾಗೂ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದಲ್ಲಿ ಬೆಂಗಳೂರು ನಿರ್ವಹಣಾ ಸಂಸ್ಥೆ ಏರ್ಪಡಿಸಿದ್ದ ವಿಶ್ವದಲ್ಲಿ ಭಾರತ ಮುಂದಿನ ದಶಕದಲ್ಲಿ ಜ್ಞಾನ ಮತ್ತು ವೃತ್ತಿಪರತೆಯ ದೇಶವಾಗಿ ಹೊರ ಹೊಮ್ಮಲಿದೆ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೃತ್ತಿಪರರಿಗೆ ಬೇಡಿಕೆ: ಮುಂದಿನ ದಶಕದಲ್ಲಿ ಪ್ರತಿವರ್ಷ 60-70 ಲಕ್ಷ ವೃತ್ತಿಪರರಿಗೆ ಬೇಡಿಕೆ ಉಂಟಾಗಲಿದ್ದು , ಪ್ರತಿವರ್ಷ 50-60 ಸಾವಿರ ಡಾಲರ್‌ ವಹಿವಾಟು ಈ ಕ್ಷೇತ್ರದಲ್ಲಿ ನಡೆಯುವ ಅಂದಾಜಿದೆ. ವಾರ್ಷಿಕ ಬೆಳವಣಿಗೆ ದರ ಶೇ.8ರಷ್ಟು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈಗಿರುವ ಶೈಕ್ಷಣಿಕ ಮೂಲಸೌಕರ್ಯ ಹಾಗೂ ಶಿಕ್ಷಣ ಪದ್ಧತಿಯಲ್ಲಿ ವಾರ್ಷಿಕ 70 ಲಕ್ಷ ವೃತ್ತಿಪರರನ್ನು ಪೂರೈಸಿಕೊಳ್ಳುವುದು ಕಷ್ಟ ಎಂದರು.

ಯುವಜನರು ವೃತ್ತಿಪರತೆ ಹೆಚ್ಚಿಸಿಕೊಳ್ಳುವುದಕ್ಕೆ ಹಾಗೂ ಬೇರೆ ಬೇರೆ ರಾಜ್ಯ ಮತ್ತು ಹೊರದೇಶಗಳ ಸವಾಲುಗಳನ್ನು ಎದುರಿಸಲು ಆಂಗ್ಲ ಭಾಷೆ ಆಳವಡಿಸಿಕೊಂಡು ಆರಂಭದಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾದ ಸಂದರ್ಭ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ವೃತ್ತಿಪರ ಶಿಕ್ಷಣ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೂ ತಲುಪಬೇಕು. ಈನಿಟ್ಟಿನಲ್ಲಿ ಅವರಿಗೂ ಅಗತ್ಯ ನೆರವು ಮತ್ತು ಪ್ರೋತ್ಸಾಹ ನೀಡಬೇಕಾಗಿದೆ. ಇದರಿಂದ ದೇಶದಲ್ಲಿ ತಲೆದೂರಿರುವ ವೃತ್ತಿಪರ ಪ್ರತಿಭೆಗಳ ಸಮಸ್ಯೆಯನ್ನು ನೀಗಿಸಬಹುದಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಬಿಪಿಓ ಕಂಪನಿಗಳನ್ನು ತೆರೆಯುವುದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೃತ್ತಿಪರತೆ ಉತ್ತೇಜನ ನೀಡಲು ಮುಂದಾಗುವುದಾಗಿ ಭರವಸೆ ನೀಡಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ಅಖಿಲ ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರಧಾನ ನಿರ್ದೇಶಕಿ ರೇಖಾ ಸೇಥಿ, ಇನ್ಫೋಸಿಸ್ ಸಂಸ್ಥೆಯ ಸಿಇಒ ಕ್ರಿಸ್ ಗೋಪಾಲಕೃಷ್ಣನ್ ಭಾಗವಹಿಸಿದ್ದರು.

ಓದಲು ಮರೆಯದಿರಿ : ಅಮೆರಿಕದಲ್ಲೊಂದು ಕನ್ನಡ ಶಾಲೆ!


ವಿಡಿಯೋಗಳು:
ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X