ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷಾಟನೆ ಜಾಲದಿಂದ ಬಿಹಾರ ಮಕ್ಕಳು ಬಚಾವ್

By Mahesh
|
Google Oneindia Kannada News

Bihar children rescued
ಬೆಂಗಳೂರು, ಅ.27: ವಿದ್ಯೆ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಕರೆತಂದು ಭಿಕ್ಷಾಟನೆಗೆ ಬಿಡುವ ಜಾಲವನ್ನು ನಗರದ ಪೊಲೀಸರು ಬೇಧಿಸಿದ್ದಾರೆ. ಚೈಲ್ಡ್ ಲೆನ್ ಎಂಬ ಸ್ವಯಂ ಸೇವಾ ಸಂಸ್ಥೆ ಸಹಕಾರದಿಂದ ಒಟ್ಟು 24 ಮಕ್ಕಳನ್ನು ರಕ್ಷಿಸಲಾಗಿದೆ. ಅಬ್ದುಲ್ ಬಷೀರ್ ಎಂಬ ವ್ಯಕ್ತಿ ಬಿಹಾರದಿಂದ ಈ ಮಕ್ಕಳನ್ನು ಗೋರಖ್ ಪುರ ಎಕ್ಸ್ ಪ್ರೆಸ್ ನಿಂದ ಬೆಂಗಳೂರಿಗೆ ಕರೆ ತರುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಯಶವಂತಪುರ ನಿಲ್ದಾಣದಲ್ಲಿ ಇಂದು ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ.

ನಿಲ್ದಾಣಕ್ಕೆ ಆಗಮಿಸಿರುವ ಮಹಿಳಾ ಮತ್ತು ಮಕ್ಕಳ ಆಯೋಗದ ವೀಣಾ ನಾಯ್ಕ ಹಾಗೂ ವೈದ್ಯರು ಮಕ್ಕಳ ತಪಾಸಣೆ ನಡೆಸಿದರು. ಆರೋಪಿ ಅಬ್ದುಲ್ ರಷೀದ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮಕ್ಕಳನ್ನು ಮದರಸಾಗೆ ಸೇರಿಸಿ, ವಿದ್ಯಾಭ್ಯಾಸ ಕೊಡಿಸಲು ಕರೆತಂದಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಇಷ್ಟು ಜನ ಮಕ್ಕಳನ್ನು ಕರೆತರಲು ಆತನ ಬಳಿ ಯಾವುದೇ ಅನುಮತಿ ಪತ್ರ ಇಲ್ಲ. ಅಲ್ಲಿನ ಜಿಲ್ಲಾ ಪಂಚಾಯಿತಿಯ ಪತ್ರವೊಂದು ಮಾತ್ರ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.

ಸುದ್ದಿಗಾರರೊಡನೆ ಮಾತನಾಡಿದ ಕೆಲ ಮಕ್ಕಳು, ನಾವು ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದಿದ್ದೇವೆ. ನಮಗೆ ಯಾವುದೇ ತೊಂದರೆ ಆಗಿಲ್ಲ ಎಂದಿದ್ದಾರೆ. ಅಪ್ರಾಪ್ತ ವಯಸ್ಕ ಮಕ್ಕಳಿಗೆ ಚೆನ್ನಾಗಿ 'ಬ್ರೈನ್ ವಾಷ್' ಮಾಡಿ, ಮಕ್ಕಳ ಅಕ್ರಮ ಸಾಗಾಣಿಕೆಯಲ್ಲಿ ರಷೀದ್ ತೊಡಗಿದ್ದು, ಬೆಂಗಳೂರಿನಲ್ಲಿ ಮಕ್ಕಳನ್ನು ಭಿಕ್ಷಾಟನೆ ಜಾಲಕ್ಕೆ ದೂಡುವುದು ಸುಲಭ ಎಂದು ಇಲ್ಲಿಗೆ ಕರೆತಂದಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ, ಬಿಹಾರಿ ಮಕ್ಕಳ ಅಸಲಿ ಪ್ರವಾಸದ ಗುಟ್ಟು ಇನ್ನೂ ಹೊರಬಿದ್ದಿಲ್ಲ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X