ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿ ಕ್ರಿಕೆಟಿಗರ ಸ್ಪಾಟ್ ಫಿಕ್ಸಿಂಗ್ ಐಸಿಸಿ ಶಂಕೆ : ಜಿಯಾ

By Mrutyunjaya Kalmat
|
Google Oneindia Kannada News

Pakistani Players
ಇಸ್ಲಾಮಾಬಾದ್, ಅ. 26 : ಸಿಡ್ನಿ ಟೆಸ್ಟ್‌ನಲ್ಲಿ ಪಾಕಿಸ್ತಾನದ ಆರು ಕ್ರಿಕೆಟಿಗರು ಕಳ್ಳಾಟದಲ್ಲಿ ಪಾಲ್ಗೊಂಡಿರುವ ಬಗ್ಗೆ ಐಸಿಸಿ ಶಂಕೆ ಹೊಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ತಾಕಿರ್ ಜಿಯಾ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಸ್ಪಾಟ್ ಫಿಕ್ಸಿಂಗ್ ಗೆ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ವರ್ಷದ ಆರಂಭದಲ್ಲಿ ನಡೆದ ಸಿಡ್ನಿ ಟೆಸ್ ನಲ್ಲಿ ಆರು ಆಟಗಾರರು ಕಳ್ಳಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಂಕೆ ಹೊಂದಿರುವ ಐಸಿಸಿ ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ಪಿಸಿಬಿಗೆ ಐಸಿಸಿ ಸೂಚನೆ ನೀಡಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಜಿಯಾ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಸ್ಥಳೀಯ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಜಿಯಾ, ಈ 6 ಆಟಗಾರರು ಶಂಕಿತ ಬುಕ್ಕಿಗಳೊಂದಿಗೆ ಎಸ್‌ಎಂಎಸ್ ಸಂದೇಶ ವಿನಿಮಯ ಮಾಡಿಕೊಂಡಿರುವುದು ಐಸಿಸಿಗೆ ತಿಳಿದಿದೆ. ಈ ಬಗ್ಗೆ ಗಮನ ಹರಿಸಲು ಪಿಸಿಬಿಗೆ ಸೂಚನೆ ನೀಡಿರುವುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ನಂತರ ಆಟಗಾರರು ವಿಶ್ವಕಪ್ ಟಿ-20 ಮತ್ತು ಏಷ್ಯಾಕಪ್ ಗಾಗಿ ಪ್ರಯಾಣ ಬೆಳೆಸಿದಾಗ ಐಸಿಸಿ ಈ ಸೂಚನೆ ನೀಡಿತ್ತು. ಆದರೆ ಈ ಬಗ್ಗೆ ಪಿಸಿಬಿ ಯಾವ ಕ್ರಮ ಕೈಗೊಂಡಿತು ಎಂಬ ಮಾಹಿತಿ ತಿಳಿದಿಲ್ಲ ಎಂದು ಜಿಯಾ ವಿವರಿಸಿದರು. ಏತನ್ಮಧ್ಯೆ 2002ರಲ್ಲಿ ಶಂಕಿತ ಬುಕ್ಕಿಯೊಬ್ಬ ತಮ್ಮನ್ನು ಸಂಪರ್ಕಿಸಿ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಆಟಗಾರನೊಬ್ಬನ ಪರ ವಕಾಲತ್ತು ವಹಿಸಿದ್ದ ಎಂಬ ಮತ್ತೊಂದು ಸತ್ಯವನ್ನು ಜಿಯಾ ಹೊರಹಾಕಿದ್ದಾರೆ.

ಶಂಕಿತ ಬುಕ್ಕಿಗಳು ನನಗೆ ದೂರವಾಣಿ ಕರೆ ಮಾಡಿ ನಿರ್ದಿಷ್ಟ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡುವಂತೆ ಒತ್ತಡ ಹೇರಿದರು. ಆದರೆ ನಾನು ಅದಕ್ಕೆ ಕಿವಿಗೊಡಲಿಲ್ಲ ಎಂದು ಜಿಯಾ ವಿವರಿಸಿದರು. ಜಿಯಾ ಆ ಆಟಗಾರನ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದರೂ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲಿಂ ಮಲಿಕ್ ಅವರತ್ತ ಬೆರಳು ಹೋಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X