ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೆ ವಾಪಾಸ್ಸಾದ ರಿಯಲ್‌ ಎಸ್ಟೇಟ್‌ ಉದ್ಯಮಿ

By Mahesh
|
Google Oneindia Kannada News

Kidnapped businessman Satish Chandra returns
ಬೆಂಗಳೂರು, ಅ.25: ಜೆ.ಪಿ ನಗರದ ರಿಯಲ್ ಎಸ್ಟೇರ್ ಉದ್ಯಮಿ ಸತೀಶ್ ಚಂದ್ರ ಅವರ ಕಿಡ್ನಾಪ್ ಪ್ರಕರಣ ಸುಖ್ಯಾಂತ ಕಂಡಿದೆ. ಮಾರುತಿ ಕಾರಿನಲ್ಲಿ ಬಂದ ಆರು ಮಂದಿ ಮುಸುಕುಧಾರಿಗಳು ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಲೂಟಿ ಮಾಡಿ, ಅಪಹರಿಸಿಕೊಂಡು ಹೋಗಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿಂದ ಸತೀಶ್ ನೇರ ಮನೆಗೆ ಹಿಂತಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಪಿ ನಗರದ ಡಾಲರ್ಸ್ ಕಾಲೋನಿ ನಿವಾಸಿ ಸತೀಶ್‌ಚಂದ್ರ (40) ಅಪಹರಣಕ್ಕಿದ್ದರು. ಸೋಮವಾರ ಮುಂಜಾನೆ 5.30ರ ಸುಮಾರಿಗೆ ನಾಯಿಯನ್ನು ಹೊರಗೆ ಕರೆದುಕೊಂಡು ಮಾರ್ನಿಂಗ್ ವಾಕ್ ಹೋಗಿದ್ದ ಸತೀಶ್‌ ಅವರು ಆನಂತರ ನಾಪತ್ತೆಯಾಗಿದ್ದರು. ವಾಕಿಂಗ್‌ ಹೋಗುವ ವೇಳೆ ಮಾರುತಿ ವ್ಯಾನ್‌ನಲ್ಲಿ ಬಂದಿರುವ ಆರು ಮಂದಿ ಮನೆಯಲ್ಲಿದ್ದ ನಗದು ಚಿನ್ನಾಭರಣವನ್ನು ಎರಡು ಸೂಟ್‌ಕೇಸ್‌ನಲ್ಲಿ ದೋಚಿಕೊಂಡು, ಮನೆ ಮಾಲಿಕನನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲ್ಲುವುದಾಗಿ ಗನ್‌ ತೋರಿಸಿ ಬೆದರಿಕೆ ಹಾಕಿ ಕರೆದುಕೊಂಡು ಹೋಗಿದ್ದ ದುಷ್ಕರ್ಮಿಗಳು, ತಮಿಳುನಾಡಿನ ಕೃಷ್ಣಗಿರಿ ಸಮೀಪ ಬಿಟ್ಟು ಪರಾರಿಯಾಗಿದ್ದರು.

ಕೂಡಲೇ ಸತೀಶ್‌ ಚಂದ್ರ ಮನೆಗೆ ಕರೆ ಮಾಡಿ ನಡೆದ ಘಟನೆಯನ್ನು ಪತ್ನಿ ಆಶಾ ಅವರಿಗೆ ತಿಳಿಸಿ, ಹೊಸೂರಿಗೆ ವಾಪಸು ಆಗಿದ್ದಾರೆ. ಹೊಸೂರಿನಿಂದ ಪೊಲೀಸರು ಉದ್ಯಮಿಯನ್ನು ಜೆಪಿನಗರದ ಅವರ ನಿವಾಸಕ್ಕೆ ಕರೆತಂದಿದ್ದಾರೆ.

ಸಚಿವರ ಆಪ್ತ ಉದ್ಯಮಿ: ಈ ಮೊದಲು ಗಾರ್ಮೆಂಟ್‌ ಉದ್ಯಮ ನಡೆಸುತ್ತಿದ್ದ ಸತೀಶ್‌ಚಂದ್ರ ಕೇಂದ್ರ ಸಚಿವರೊಬ್ಬರ ಆಪ್ತರಾಗಿದ್ದಾರೆ. ಗಾರ್ಮೆಂಟ್‌ ಉದ್ಯಮ ಬಿಟ್ಟು ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಿದ್ದರಾಮಪ್ಪ , ಎಸಿಪಿ ರಮೇಶ್‌ ಚಂದ್ರ ಹಾಗೂ ಇನ್ಸ್‌ಪೆಕ್ಟರ್‌ ಉಮೇಶ್‌, ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಅಪಹರಿಸಿಕೊಂಡ ಹೋದ 10 ತಾಸಿನಲ್ಲಿಯೇ ಆತನನ್ನು ಬಿಡುಗಡೆ ಮಾಡಿದ್ದಾರೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X