ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ ಕೂಟದ ಭ್ರಷ್ಟಾಚಾರಕ್ಕೆ ಬಿಜೆಪಿ ಹೋರಾಟ

By Mrutyunjaya Kalmat
|
Google Oneindia Kannada News

CWG 2010 logo
ನವದೆಹಲಿ, ಅ. 26 : ಕಾಮನ್‌ವೆಲ್ತ್ ಕ್ರೀಡಾಕೂಟದ ಕಾಮಗಾರಿಯಲ್ಲಿ ನಡೆದಿರುವ ಸರಣಿ ಭ್ರಷ್ಟಾಚಾರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಬಿಜೆಪಿ ಯುವ ಮೋರ್ಚಾ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಕ್ರೀಡೆ ಹೆಸರಿನಲ್ಲಿ ನಡೆದಿರುವ ಈ ಭ್ರಷ್ಟಾಚಾರ ವಿಶ್ವದಲ್ಲೇ ಅತಿ ದೊಡ್ಡ ಹಗರಣವಾಗಿದೆ. ರಾಷ್ಟ್ರೀಯ ಹಿತಾಸಕ್ತಿಯಿಂದ ಹಾಗೂ ವಿವಾದಕ್ಕೆ ಆಸ್ಪದ ಕೊಡಬಾರದೆಂಬ ಉದ್ದೇಶದಿಂದ ಕ್ರೀಡಾಕೂಟ ಪೂರ್ಣಗೊಳ್ಳುವವರೆಗೂ ಈ ಕುರಿತು ಮಾತನಾಡದಿರಲು ಯುವ ಮೋರ್ಚಾ ನಿರ್ಧರಿಸಿತ್ತು. ಕ್ರೀಡಾಕೂಟ ಸಿದ್ಧತೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕಾಲಮಿತಿಯೊಳಗೆ ತನಿಖೆ ನಡೆಸಬೇಕು.

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅದು ಒತ್ತಾಯಿಸಿದೆ. ಹನ್ನೆರಡು ದಿನಗಳು ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 2003ರಲ್ಲಿ ನಿಗದಿಯಾಗಿದ್ದ ಬಜೆಟ್ 1899 ಕೋಟಿ ರೂ. ಆದರೆ 2010ರಲ್ಲಿ ಇದು 70 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಮೂಲ ವೆಚ್ಚಕ್ಕಿಂತ 17 ಪಟ್ಟು ಹೆಚ್ಚಿಸಲಾಗಿದೆ. ಈ ಏರಿಕೆ ಹಿಂದೆ ಕೆಲಸ ಮಾಡಿದವರು ಯಾರು ? ಎಂದು ಪ್ರಶ್ನಿಸಿದೆ. ಕ್ರೀಡಾಕೂಟದ ಹೊಣೆ ಹೊತ್ತಿದ್ದ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರವಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಅಧಿಕಾರದಲ್ಲಿದೆ. ಹೀಗಿರುವಾಗ ಅಕ್ರಮ, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂಬ ಅನುಮಾನ ಬರುತ್ತದೆ.

70 ಸಾವಿರ ಕೋಟಿ ಗಳಲ್ಲಿ ಕ್ರೀಡಾಕೂಟಕ್ಕೆ ಖರ್ಚು ಮಾಡಿದ್ದು 150 ಕೋಟಿ ರೂ. ಭಾರತೀಯ ಕ್ರೀಡಾಪಟುಗಳಿಗೆ 350 ಕೋಟಿ ರೂ. ವ್ಯಯಿಸಲಾಗಿದೆ. ನೆಹರೂ ಕ್ರೀಡಾಂಗಣಕ್ಕೆ 961 ಕೋಟಿ ರೂ. ಖರ್ಚು ತೋರಿಸಲಾಗಿದೆ. ಆದರೆ ನವೀಕರಣಕ್ಕೆ ವೆಚ್ಚ ವಾಗಿರುವುದು ಕೇವಲ 100 ಕೋಟಿ ರೂ. ಮಾತ್ರ. ಉಳಿಕೆ 891 ಕೋಟಿ ರೂ.ಗಳು ಎಲ್ಲಿ ಹೋಯಿತು. ಈ ಕುರಿತು ದೇಶದ ಜನರಿಗೆ ಲೆಕ್ಕ ಕೊಡಬೇಕೆಂದು ಯುವ ಮೋರ್ಚಾ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X