ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೇರುಘಟ್ಟ:ಸಿಂಹ, ಚಿರತೆ ದುರ್ಮರಣ

By Mahesh
|
Google Oneindia Kannada News

Two more wild cats die at BBP
ಆನೇಕಲ್, ಅ. 24: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಮರಣ ಮೃದಂಗ ಮುಂದುವರಿದಿದೆ. ನಿನ್ನೆ ಮಧ್ಯರಾತ್ರಿ 1:30ರ ಸುಮಾರಿಗೆ ಗಣೇಶ (14) ಎಂಬ ಹೆಸರಿನ ಚಿರತೆ ಹಾಗೂ ರಾಜಾ (26) ಎಂಬ ಹೆಸರಿನ ಸಿಂಹ ಮುಂಜಾನೆ ಮೃತಪಟ್ಟಿದೆ. ಎರಡೂ ಪ್ರಾಣಿಗಳು ಬಹಳ ದಿನಗಳಿಂದ ಅವಸ್ಥವಾಗಿದ್ದವು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿವೆ ಎಂದು ವೈದ್ಯಾಧಿಕಾರಿ ಚಿಟ್ಟಿಯಪ್ಪ ತಿಳಿಸಿದ್ದಾರೆ.

ಹೆಚ್ ಡಿ ಕೋಟೆ ಗಣೇಶ: ಚಿರತೆ ಗಣೇಶ ಪಾರ್ಶ್ವವಾಯುವಿನಿಂದ ಬಳಲುತ್ತಿತ್ತು ಕಳೆದ ತಿಂಗಳಿನಿಂದ ಇಲ್ಲಿನ ಪುನರ್ವಸತಿ ಕೇಂದ್ರದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. 3 ವರ್ಷದ ಮರಿಯಾಗಿದ್ದಾಗ ಹೆಗ್ಗಡದೇವನಕೋಟೆ ಅರಣ್ಯದಿಂದ ಬನ್ನೇರುಘಟ್ಟ ಜೈವಿಕ ಕೇಂದ್ರಕ್ಕೆ ಗಣೇಶನನ್ನು ಕರೆತರಲಾಗಿತ್ತು. ನರ ಸಂಬಂಧಿ ಕಾಯಿಲೆ, ಕ್ಷಯ ರೋಗ ಹಾಗೂ ಎಲುಬಿನ ನೋವಿನಿಂದ ಬಳಲುತ್ತಿದ್ದ ಚಿರತೆ, ಕೆಲದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿರಲಿಲ್ಲ. ದ್ರವರೂಪದ ಆಹಾರದಲ್ಲೇ ಎರಡು ದಿನಗಳ ಕಾಲದೂಡಿದ ಗಣೇಶ, ಕೊನೆಗೆ ಭಾನುವಾರ ಅಸುನೀಗಿದ್ದಾನೆ.

ಗುಲ್ಬರ್ಗಾದ ರಾಜ: ಗೀತಾ ಸರ್ಕಸ್ ನಿಂದ 2000ರಲ್ಲಿ ಕರೆತರೆಲಾಗಿದ್ದ ಸಿಂಹ ರಾಜ, ಅತ್ಯಂತ ಹಿರಿಯ ವಯಸ್ಸಿನ ಪ್ರಾಣಿಯಾಗಿತ್ತು. ಸಿಂಹಗಳು ಸಾಮಾನ್ಯವಾಗಿ 12 ರಿಂದ 15 ವರ್ಷಗಳ ಕಾಲ ಬದುಕುತ್ತವೆ. ಪುನರ್ವಸತಿ ಕೇಂದ್ರದ ಉತ್ತಮ ವಾತಾವರಣದಲ್ಲಿ ರಾಜಾ 26 ವರ್ಷಗಳ ಕಾಲ ಜೀವಿಸಿದ್ದ. ವಯೋ ಸಹಜ ಸಾವನ್ನಪ್ಪಿದ ಎಂದು ಡಾ. ಚೆಟ್ಟಿಯಪ್ಪ ಹೇಳುತ್ತಾರೆ.

ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X