ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ಹಕ್ಕು: ನ.1ರಿಂದ ಪ್ರತ್ಯೇಕ ಕಾಲ್ ಸೆಂಟರ್

By Mahesh
|
Google Oneindia Kannada News

MN Vidyashankar
ಬೆಂಗಳೂರು, ಅ.25: ಒಂದೆಡೆ ರಾಜಕೀಯ ಅಸ್ಥಿರತೆಯಿಂದ ಆಡಳಿತ ತತ್ತರಿಸುತ್ತಿದೆ. ಇನ್ನೊಂದೆಡೆ ಇ ಅಡಳಿತದಂಥ ಪ್ರಬಲ ಯೋಜನೆ ಮೂಲಕ ದೇಶದಲ್ಲೇ ಪ್ರಥಮಬಾರಿಗೆ ಸಾರ್ವಜನಿಕರಿಗೆ ಇರುವ ಸಮಸ್ಯೆಗಳ ನಿವಾರಣೆಗಾಗಿ ಆರ್‍ ಟಿಐ ಕಾಲ್ ಸೆಂಟರ್ ಅನ್ನು ರಾಜ್ಯೋತ್ಸವ ದಿನದಂದು ಆರಂಭಿಸಲು ರಾಜ್ಯ ಇ-ಆಡಳಿತ ಇಲಾಖೆ ಸಿದ್ಧತೆ ನಡೆಸಿದೆ.

ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ವಿಶ್ವದ ಗಮನ ಸೆಳೆದಿರುವ ರಾಜ್ಯ ಸರ್ಕಾರ, ಇ-ಆಡಳಿತದಲ್ಲಿ ಅನೇಕ ಅವಿಷ್ಕಾರಗಳನ್ನು ರಾಜ್ಯ ಸರ್ಕಾರ ಮಾಡಿದೆ. ಇ-ಆಡಳಿತ ಇಲಾಖೆ ಮಾಹಿತಿ ಹಕ್ಕು ಯೋಜನೆಗಾಗಿಯೇ ಪ್ರತ್ಯೇಕ ಕರೆ ಕೇಂದ್ರವೊಂದನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವ ರೀತಿಯಲ್ಲಿ ಜಾರಿಗೆ ತರುತ್ತಿದೆ. ಮಾಹಿತಿ ಹಕ್ಕು ಯೋಜನೆಯನ್ನು ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಯಶಸ್ವಿಯಾಗಿ ಅನುಷ್ಠಾನ ಮಾಡಿದ ಕೀರ್ತಿಯೂ ರಾಜ್ಯ ಸರ್ಕಾರಕ್ಕೆ ಸಲುತ್ತಿದೆ.

ಬೆಂಗಳೂರು ಅನೇಕ ವಿದೇಶಿ ಕಂಪೆನಿಗಳ ಕರೆ ಕೇಂದ್ರಗಳನ್ನು ಹೊಂದಿದೆ. ಇದಲ್ಲದೇ ರಾಜ್ಯ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿಯೇ ಗ್ರಾಮೀಣ ಬಿಪಿಒ ಗಳನ್ನು ಸಹ ಆರಂಭಿಸಿದೆ. ಆದರೆ ಮಾಹಿತಿ ಹಕ್ಕಿಗಾಗಿಯೇ ಪ್ರತ್ಯೇಕವಾದ ಕಾಲ್‌ ಸೆಂಟರ್‌ವೊಂದು ಆರಂಭವಾಗುತ್ತಿರುವುದು ಇಡೀ ದೇಶದಲ್ಲಿಯೇ ಪ್ರಥಮ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ವಿದ್ಯಾಶಂಕರ್‌ ಹೇಳಿದರು.

ಕಾರ್ಯ ನಿರ್ವಹಣೆ ಹೇಗೆ ?: ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದೇ ಸಂಖ್ಯೆಯ ದೂರವಾಣಿಯನ್ನು ನೀಡಲಾಗುತ್ತದೆ. ಈಗ ಆರೋಗ್ಯ ಕವಚ, ಪೊಲೀಸ್‌, ಅಗ್ನಿಶಾಮಕಕ್ಕೆ ಪ್ರತ್ಯೇಕ ದೂರವಾಣಿ ಸಂಖ್ಯೆ ಇರುವಂತೆ ಈ ಕರೆ ಕೇಂದ್ರಕ್ಕೂ ಇರುತ್ತದೆ.

ರಾಜ್ಯದ ಯಾವುದೇ ಭಾಗದಿಂದ ಯಾವುದೇ ವಿಷಯಕ್ಕೆ ಸಂಬಂಸಿದಂತೆ ಯಾವ ಕಚೇರಿಯನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ಕೋರಿ ದೂರವಾಣಿ ಮಾಡಿದರೆ ಕ್ಷಣ ಮಾತ್ರದಲ್ಲಿ ಮನೆಗೆ ಕರೆ ಮಾಡಿ ಇಂತಹ ಇಲಾಖೆಯನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ಬರುತ್ತದೆ. ಇದರಿಂದ ಯಾವುದೇ ಮಾಹಿತಿ ಪಡೆಯಲಿಚ್ಛಿಸುವವರು ಇಲಾಖೆಯಿಂದ ಇಲಾಖೆಗೆ ಅಲೆದಾಡುವುದು ತಪ್ಪುತ್ತದೆ. ಆ ಪ್ರಕಾರ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ.

ಮಾಹಿತಿ ಹಕ್ಕಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಈ ಕರೆ ಕೇಂದ್ರದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ದಿನದ 24 ಗಂಟೆಗಳ ಕಾಲ ಈ ಕರೆ ಕೇಂದ್ರ ಕಾರ್ಯ ನಿರ್ವಹಣೆ ಮಾಡುತ್ತದೆ. ನವೆಂಬರ್‌ ಒಂದರಂದು ಇದರ ಉದ್ಘಾಟನೆಯ ಜತೆಗೆ ದೂರವಾಣಿ ಸಂಖ್ಯೆಯನ್ನು ರಾಜ್ಯದ ಜನತೆಗೆ ನೀಡಲಾಗುತ್ತದೆ. ಅಂದಿನಿಂದಲೇ ಈ ಕೇಂದ್ರ ಕಾರ್ಯ ಆರಂಭಿಸಲಿದೆ ಎಂದು ಎಂ.ಎನ್‌. ವಿದ್ಯಾಶಂಕರ್ ಹೇಳಿದರು..

ಈಗಾಗಲೇ ಕರೆ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಗುತ್ತಿಗೆ ಕರೆದು ಎಲ್ಲಾ ಸಿದ್ಧ ತೆ ಮಾಡಿಕೊಳ್ಳಲಾಗಿದೆ. ನವೆಂಬರ್‌ ಒಂದರಂದು ಇದರ ಉದ್ಘಾಟನೆಯ ಜತೆಗೆ ದೂರವಾಣಿ ಸಂಖ್ಯೆಯನ್ನು ರಾಜ್ಯದ ಜನತೆಗೆ ನೀಡಲಾಗುತ್ತದೆ. ಅಂದಿನಿಂದಲೇ ಈ ಕೇಂದ್ರ ಕಾರ್ಯ ಆರಂಭಿಸಲಿದೆ. ಎಲ್ಲಾ ಮಾಹಿತಿಯೂ ಕರೆ ಕೇಂದ್ರದಲ್ಲಿರುತ್ತದೆ ಎಂದು ತಿಳಿಸಿದರು.

ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X