ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳು ಬೇಕಾಗಿದ್ದಾರೆ? ಇನ್ಫಿ, ಟಿಸಿಎಸ್

By Mrutyunjaya Kalmat
|
Google Oneindia Kannada News

Infosys
ಬೆಂಗಳೂರು, ಅ. 25 : ಮಾಹಿತಿ ತಂತ್ರಜ್ಞಾನ ವಲಯ ಮತ್ತೆ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಐಟಿ ಕಂಪನಿಗಳು ನೇಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ. ದೇಶದ ಅತಿ ದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ, ಪ್ರಸಕ್ತ ಸಾಲಿನಲ್ಲಿ 50 ಸಾವಿರ ಮಂದಿಗೆ ಉದ್ಯೋಗ ನೀಡಲು ನಿರ್ಧರಿಸಿದ್ದರೆ, ಎದುರಾಳಿ ಇನ್ಫೋಸಿಸ್, 40 ಸಾವಿರ ಹೊಸಬರಿಗೆ ಉದ್ಯೋಗ ನೀಡಲು ಮುಂದಾಗಿದೆ.

ಟಿಸಿಎಸ್ ಈ ಹಿಂದೆ ಪ್ರಸಕ್ತ ಸಾಲಿನಲ್ಲಿ 30 ಸಾವಿರ ಮಂದಿಯನ್ನು ನೇಮಿಸಲು ಬಯಸಿತ್ತು. ಇನ್ಫೋಸಿಸ್ 36 ಸಾವಿರ ಮಂದಿಯನ್ನು ನೇಮಿಸಲು ತೀರ್ಮಾನಿಸಿತ್ತು. ಆದರೆ ಬೇಡಿಕೆ ಹೆಚ್ಚಿರುವುದರಿಂದ ಗುರಿಯನ್ನು ಪರಿಷ್ಕರಿಸಲಾಗಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ನೇಮಕ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಕೆಲ್ಲಿಐಟಿ ರಿಸೋರ್ಸಸ್‌ನ ನಿರ್ದೇಶಕ ಥಾಮಾಯ್ ಹೇಳಿದ್ದಾರೆ.

ಮಧ್ಯಂತರ ಮಟ್ಟದ ನೇಮಕ ಪ್ರಕ್ರಿಯೆ ಹೆಚ್ಚಾಗಲಿದೆ. ಆದರೆ ಪ್ರವೇಶ ಹಂತದ ನೇಮಕ ಅಷ್ಟಾಗಿ ಇರಲಾರದು ಎನ್ನಲಾಗಿದೆ. ಸೆಪ್ಟೆಂಬರ್ 30ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಟಿಸಿಎಸ್ ಶೇ.11ರ ಬೆಳವಣಿಗೆಯನ್ನು ದಾಖಲಿಸಿತ್ತು. ಕಂಪನಿ ಹೊಸ ಆರ್ಡರ್‌ಗಳನ್ನು ಪಡೆಯುವುದರಲ್ಲಿ ಸಫಲವಾಗಿದೆ. ಮೈಕ್ರೊ ಹಂತದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ವಿಪ್ರೊ ಮುಖ್ಯಸ್ಥ ಅಜೀಮ್ ಪ್ರೇಮ್‌ಜೀ ಹೇಳಿದ್ದಾರೆ.

2008 ಮತ್ತು 2009ರಲ್ಲಿ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಕಂಪನಿಗಳು ವೇತನ ಹೆಚ್ಚಳದ ಗೋಜಿಗೇ ಹೋಗಿರಲಿಲ್ಲ. ಭತ್ಯೆಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದವು. ಆದರೆ ಮತ್ತೆ ಬೇಡಿಕೆ ಕುದುರುತ್ತಿರುವುದರಿಂದ ಹೆಚ್ಚು ವೇತನದ ಆಮಿಷ ಒಡ್ಡುತ್ತಿವೆ ಎಂದು ಗ್ಲೋಬಲ್ ಹಂಟ್‌ನ ನಿರ್ದೇಶಕ ಸುನೀಲ್ ಗೋಯೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X