ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್ ದುರ್ಬಳಕೆ ಗೌಡ್ರು ಕಲಿಸಿದ ಪಾಠ

By Mahesh
|
Google Oneindia Kannada News

ಬೆಂಗಳೂರು, ಅ.24: ದೇವೇಗೌಡ ಭಸ್ಮಾಸುರ, ರೇವಣ್ಣ ರಾವಣ, ಕಾಳಾ ಸಾಪ್ ಎಂದೆಲ್ಲಾ ಸೂಪರ್ ಡೈಲಾಗ್ ಹೊಡೆದು ಡೈಲಾಗ್ ಕಿಂಗ್ ಎನಿಸಿದ್ದ ಬಚ್ಚೇಗೌಡರು ಮತ್ತೆ ತಮ್ಮ ವಾಗ್ಝರಿ ಹರಿಸಿದ್ದಾರೆ. ಬಿಜೆಪಿಯಿಂದ ಸ್ಪೀಕರ್ ಸ್ಥಾನ ದುರ್ಬಳಕೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ವಿಧಾನಸಭಾಧ್ಯಕ್ಷರ ಸ್ಥಾನ ದುರ್ಬಳಕೆ ಮಾಡಿದ್ದರಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದು, ಅದಕ್ಕೆಲ್ಲಾ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೂತ್ರಧಾರಿಯಾಗಿದ್ದರು ಎಂದು ಕಾರ್ಮಿಕ ಸಚಿವ ಬಿ.ಎನ್‌. ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೆಸಾರ್ಟ್ ರಾಜಕಾರಣ ಜೆಡಿಎಸ್ ಕೊಡುಗೆ: ವಿಧಾನಸೌಧ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ರೆಸಾರ್ಟ್‌ ರಾಜಕಾರಣದ ಸಂಸ್ಕೃತಿಗೆ ಅಡಿಪಾಯ ಹಾಕಿದ ಕುಮಾರಸ್ವಾಮಿ, ಕೆ.ಆರ್‌.ಪೇಟೆ ಕೃಷ್ಣ ಅವರು ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಎಚ್‌.ಡಿ.ದೇವೇಗೌಡರು ಏನು ಮಾಡಿದರು ಎಂಬುದು ನಮಗೂ ಗೊತ್ತಿದೆ. ಇವರ ಪೂವಾಶ್ರಮ ಎಂತದ್ದು ಎಂಬುದು ತಿಳಿದಿದೆ ಎಂದು ತಿರುಗೇಟು ನೀಡಿದರು.

ಸಭಾಧ್ಯಕ್ಷರ ಕೊಠಡಿಯನ್ನು ಕಲುಷಿತಗೊಳಿಸಿದ ದೇವೇಗೌಡರು ಇದೀಗ, ವಿಧಾನಸೌಧ, ಸ್ಪೀಕರ್‌ ಕಚೇರಿಯನ್ನು ಶುದ್ಧೀಕರಣ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆ ಕೆಲಸ ಆಗಲೇ ಮಾಡಿದ್ದರೆ ಯಡಿಯೂರಪ್ಪ ಬಗ್ಗೆ ಮಾತನಾಡಲು ನೈತಿಕತೆ ಇರುತ್ತಿತ್ತು ಎಂದು ಹೇಳಿದರು.

ಎಲ್ಲಾ ಬೋಗಸ್ : ಬಿಜೆಪಿ ಶಾಸಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಸ್ವಂತ ಜೆಡಿಎಸ್ ಶಾಸಕರು ಈಗಲ್ಟನ್ ರೆಸಾರ್ಟ್ ನಲ್ಲಿ ಗೋಳಾಡುತ್ತಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸರಿಗೆ ಆಮೀಷ ಒಡ್ಡಿರುವ ಸಿಡಿ ಅಸಲಿಯಲ್ಲ, ತಂತ್ರಜ್ಞಾನ ನೆರವಿನಿಂದ ಸಿದ್ಧಪಡಿಸಿದ ಸಿ.ಡಿ. ಇದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ಮತ್ತು ದೇವೇಗೌಡರು ಸೃಷ್ಟಿಸಿರುವ ಷಡ್ಯಂತ್ರ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇಂಡಿಯನ್‌ ಬ್ಯಾಂಕ್‌ ನೆರವಿನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ವಿತರಿಸಿದರು.

ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X