ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಿಂಗಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಶಾಖೆ

By Mahesh
|
Google Oneindia Kannada News

Ravishankar Guruji
ಬೆಂಗಳೂರು, ಅ.22: ಕಮ್ಯೂನಿಸ್ಟ್ ದೇಶ ಚೀನಾದಲ್ಲಿ ಆರ್ಟ್ ಆಫ್ ಲಿವಿಂಗ್ ನ ಚೊಚ್ಚಲ ಆಶ್ರಮವನ್ನು ಆಧ್ಯಾತ್ಮಿಕ ಗುರು, ಮಾನವತಾವಾದಿ ರವಿಶಂಕರ್ ಗುರೂಜಿ ಚೀನಾದ ಬೀಜಿಂಗ್‌ನಲ್ಲಿ ಅ. 24 ರಂದು ಉದ್ಘಾಟಿಸಲಿದ್ದಾರೆ. ಚೀನಾಕ್ಕೆ ಭಾರತೀಯ ಆಧ್ಯಾತ್ಮಿಕ ನಾಯಕರೊಬ್ಬರ ಪ್ರಥಮ ಭೇಟಿ ಇದಾಗಿದೆ.

ಸುದರ್ಶನ ಕ್ರಿಯಾ ಮುಲಕ ಪ್ರಾಣಾಯಾಮ, ಯೋಗ ಮತ್ತು ಉಸಿರಾಟ ಕೌಶಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜನಮಾನಸದಲ್ಲಿ ತನ್ನ ಛಾಪನ್ನೊತ್ತಿದ ಆರ್ಟ್ ಆಫ್ ಲಿವಿಂಗ್ ಚೀನಾದ ಬೀಜಿಂಗ್ ನಲ್ಲಿ ಆಶ್ರಮವನ್ನು ತೆರೆಯುತ್ತಿರುವುದು ಅದರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ.

ಆರ್ಟ್ ಆಫ್ ಲಿವಿಂಗ್ ಇದು ನೆಮ್ಮದಿಯ ಜೀವನಕ್ಕೆ ಸುಗಮ ಹಾದಿ ತೋರಿಸುತ್ತದೆ. ಜನ ಮನಸ್ಸಿನ ನೆಮ್ಮದಿಗಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಜೀವನ ಮೌಲ್ಯಗಳನ್ನು ಕಲಿತು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.

ಕನಕಪುರದಿಂದ ಚೀನಾಕ್ಕೆ: ಬೆಂಗಳೂರಿನಲ್ಲಿ 1981 ರಲ್ಲಿ ಆರಂಭವಾದ ಆರ್ಟ್ ಆಫ್ ಲಿವಿಂಗ್ ಜಗತ್ತಿನಾದ್ಯಂತ 151 ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವುದು ಒಂದು ಹೆಗ್ಗಳಿಕೆಯೇ ಸರಿ. ಮಾನಸಿಕ ಖಿನ್ನತೆ, ಒತ್ತಡ ಮತ್ತು ಹಿಂಸಾತ್ಮಕ ಪ್ರವೃತ್ತಿ ಯಿಂದ ಹೊರಬರಲು ಆರ್ಟ್ ಆಫ್ ಲಿವಿಂಗ್ ಸಹಾಯ ಮಾಡುತ್ತದೆ. ವೇಗದ ಮತ್ತು ಅಶಿಸ್ತಿನ ಜೀವನದಲ್ಲಿ ಪ್ರಾಣಾಯಾಮದ ಪ್ರಾಮುಖ್ಯತೆಯನ್ನು ಇದು ತೋರಿಸಿ ಕೊಟ್ಟಿದೆ. ಈ ಕಾರಣಕ್ಕಾಗಿಯೇ ಆರ್ಟ್ ಆಫ್ ಲಿವಿಂಗ್ ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಶಿಷ್ಯಂದಿರು ಮತ್ತು ಹಿಂಬಾಲಕರಿದ್ದಾರೆ.

ಕಳೆದೆರಡು ವರ್ಷಗಳಿಂದ ಇಲ್ಲಿಂದ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರು ಚೀನಾಕ್ಕೆ ಭೇಟಿ ನೀಡಿ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಸುಮಾರು 25ಕ್ಕೂ ಅಧಿಕ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಗುರೂಜಿಯವರು ಚೀನಾ ಪ್ರವಾಸ ಸಂದರ್ಭ ಆಶ್ರಮದಲ್ಲಿ Chinese People"s Association for Friendship ಏರ್ಪಡಿಸಿದ ಸತ್ಸಂಗದಲ್ಲಿ ಭಾಗವಹಿಸಲಿದ್ದಾರೆ. ಬೀಜಿಂಗ್‌ನಲ್ಲಿ ಆರೋಗ್ಯ ಮತ್ತು ಆನಂದ ಯೋಗ ಶಿಬಿರವನ್ನು ನಡೆಸಿಕೊಡುತ್ತಾರೆ.

ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X