ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ನೀಡಿ ಚುನಾವಣೆ ಎದುರಿಸಿ :ಎಚ್ಡಿಕೆ

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಅ.21: ಆಪರೇಷನ್‌ ಕಮಲದ ಅನೈತಿಕ ಮಾರ್ಗದಲ್ಲಿ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಬಿಟ್ಟು ರಾಜೀನಾಮೆ ನೀಡಿ ಜನರ ಮುಂದೆ ಹೋಗಿ ನೋಡಿ ಆಗ ಗೊತ್ತಾಗುತ್ತೆ ನಿಮ್ಮ ಬಂಡವಾಳ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.

ವಜ್ರ ಕಳೆದುಹೋಗಲ್ಲ: ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಿಎಂ ವಿರುದ್ದ ವಾಗ್ಧಾಳಿ ನಡೆಸಿ, ಬಿಜೆಪಿ ಎರಡನೇ ಹಂತದ ಆಪರೇಷನ್‌ ಕಮಲ ನಡೆಸಿದರೆ ಬಿಜೆಪಿ ಶಾಸಕರ ಸಂಖ್ಯೆ 80ಕ್ಕೆ ಕುಸಿದು ಸರ್ಕಾರ ತಾನಾಗೇ ಬಿದ್ದು ಹೋಗುತ್ತದೆ. ವಜ್ರದ ಹಾಗೆ ಇರುವ ಜೆಡಿಎಸ್‌ನ ಶಾಸಕರನ್ನು ಸೆಳೆಯಲು ಸಹ ಬಿಜೆಪಿಗೆ ಸಾಧ್ಯವಿಲ್ಲ ಎಂದರು.

ಸ್ಪೀಕರ್‌ ಅವರು ಪಕ್ಷಪಾತದಿಂದ ನಡೆದುಕೊಂಡಿದ್ದಾರೆ ಎಂದು ಟೀಕಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಅಧಿವೇಶನದಲ್ಲಿ ಸದನ ಪ್ರವೇಶಿಸಲು ಮುಂದಾದ ಪ್ರತಿಪಕ್ಷ ನಾಯಕರು ಮತ್ತು ಸದಸ್ಯರನ್ನು ಪೊಲೀಸರು ತಡೆದರು. ಪೊಲೀಸರೇ ಸದನ ಪ್ರವೇಶಿಸಿದ ಘಟನೆಯೂ ನಡೆದು ಹೋಯಿತು ಎಂದರು.

ಅತೃಪ್ತರು ಗೃಹಬಂಧನದಲ್ಲಿಲ್ಲ: ಅನರ್ಹಗೊಂಡಿರುವ 16 ಮಂದಿ ಶಾಸಕರನ್ನು ಜೆಡಿಎಸ್‌ ಗೃಹಬಂಧನದಲ್ಲಿ ಇಟ್ಟಿಲ್ಲ. ಅವರ ರಕ್ಷಣೆಗೆ ಪಕ್ಷ ಧಾವಿಸಿದೆ. ಹಿರಿಯ ಶಾಸಕ ಶಂಕರಲಿಂಗೇಗೌಡ‌ರ ಮೇಲೆ ಶಾಸಕರ ಭವನಕ್ಕೆ ನುಗ್ಗಿ ಗೂಂಡಾಗಳು ಹಲ್ಲೆ ನಡೆಸಿದರು. ಯಾರು ಈ ಹಲ್ಲೆ ನಡೆಸಿದರು ಯಾರು ಗೂಂಡಾಗಳು ಎನ್ನುವ ಬಗ್ಗೆ ಗೃಹ ಸಚಿವರು ಉತ್ತರಿಸಬೇಕು ಎಂದು ಕುಮಾರಸ್ವಾಮಿ ಪ್ರಶ್ನೆ ಎಸೆದರು.

ತನಿಖೆಗೆ ಸಿದ್ಧ : ಸರ್ಕಾರದ ಪತನಕ್ಕೆ ಗಣಿ ಮಾಲಿಕರ ಹಣ ಬಳಕೆಯಾಗಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಅವರು ಈ ಬಗ್ಗೆ ಸರ್ಕಾರ ಯಾವ ರೀತಿಯ ತನಿಖೆ ನಡೆಸಿದರೂ ಅದನ್ನು ಎದುರಿಸಲು ತಾವು ಹಾಗೂ ತಮ್ಮ ಕುಟುಂಬ ಸದಾ ಸಿದ್ಧ ಎಂದರು.

ವಿಪಕ್ಷಗಳು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಎಂದು ಸಿಎಂ ಹೇಳುತ್ತಿದ್ದಾರೆ. ಎಲ್ಲಾ ವಿಪಕ್ಷ ಶಾಸಕರು ರಾಜೀನಾಮೆ ನೀಡಲಿ ಎಂದು ಅವರು ಬಹಿರಂಗವಾಗಿ ವಿನಂತಿಸಿದರೆ ತಮ್ಮ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ವಿರೋಧ ಪಕ್ಷಗಳಿಲ್ಲದೆ ಬಿಜೆಪಿ ಪಕ್ಷ ರಾಜ್ಯಭಾರ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X