ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಥಮ ಲೇಸರ್ ನಿಯಂತ್ರಿತ ಬಾಂಬ್

By Mahesh
|
Google Oneindia Kannada News

India makes History, develops Laser Guided Bomb
ಬೆಂಗಳೂರು/ಡೆಹ್ರಾಡೂನ್, ಅ.21: ಶತ್ರುವಿನ ಗುರಿ ನಿಖರವಾಗಿ ತಲುಪಬಲ್ಲ ಸಾಮರ್ಥ್ಯವನ್ನೊಳಗೊಂಡ ದೇಶದ ಪ್ರಥಮ ಲೇಸರ್ ನಿಯಂತ್ರಿತ ಬಾಂಬ್ (ಎಲ್‌ಜಿಬಿ)ನ್ನು ಭಾರತ ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಎಡಿಇ ಸಂಸ್ಥೆ, ಎಲ್‌ಜಿಬಿಯ ಮಾರ್ಗದರ್ಶಿ ಕಿಟ್ ಅಭಿವೃದ್ಧಿಪಡಿಸಿದ್ದು,ಭಾರತೀಯ ವಾಯುಪಡೆಗೆ ಸೇರಿಕೊಳ್ಳುವ ಸಕಲ ಸಾಮರ್ಥ್ಯವನ್ನು ಈ ಎಲ್‌ಜಿಬಿಗೆ ನೀಡುವಲ್ಲಿ ಯಶಸ್ವಿಯಾಗಿದೆ.

ಡೆಹ್ರಾಡೂನ್ ನಗರದ ಸಾಧನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಐಆರ್‌ಡಿಇ)ಯ ತಾಂತ್ರಿಕ ಬೆಂಬಲದೊಂದಿಗೆ ಈ ಸಾಧನೆಗೆ ಮುನ್ನುಡಿ ಬರೆಯಲಾಗಿದೆ. ರಕ್ಷಣಾ ವಲಯದಲ್ಲಿ ನಡೆಸುವ ಸಂಶೋಧನೆಯಲ್ಲಿ ಸ್ವಯಂ ಅವಲಂಬನೆ ಸಾಧಿಸುವ ನಿಟ್ಟಿನಲ್ಲಿ ಐಆರ್‌ಡಿಇ(IRDE) ಹಾಗೂ ಡಿಆರ್‌ಡಿಒ(DRDO) ಪ್ರಯೋಗಾಲಯದಲ್ಲಿ ಈ ಆವಿಷ್ಕಾರ ನಡೆಸಿರುವುದಾಗಿ ಐಆರ್ ಡಿಇನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ತಿಳಿಸಿದ್ದಾರೆ.

ನಿರ್ದಿಷ್ಟ ಗುರಿಯನ್ನು ಸುಲಲಿತವಾಗಿ ತಲುಪಲು ಈ ಎಲ್‌ಜಿಬಿ ಸಾಮರ್ಥ್ಯ ಹೊಂದಿದೆ. ಲೇಸರ್ ಬೆಳಕಿನ ಪ್ರತಿಬಿಂಬದಿಂದ ಗುರಿ ತಲುಪುದು ಸುಲಭವಾಗುವುದಲ್ಲದೆ, ಇದರಿಂದಾಗಿ ಸೂಕ್ತ ಸಂದೇಶಗಳು ಪ್ರಯೋಗಾಲಯಕ್ಕೆ ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಲೇಸರ್ ನಿಯಂತ್ರಿತ ಮೊದಲ ಬಾಂಬನ್ನು ಅಮೆರಿಕ 1960ರಲ್ಲಿ ತಯಾರಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ನಂತರ ರಷ್ಯಾ, ಫ್ರಾನ್ಸ್ ಹಾಗೂ ಬ್ರಿಟನ್ ರಾಷ್ಟ್ರಗಳು ಲೇಸರ್ ಬಾಂಬ್‌ಗೆ ಜೀವ ನೀಡಿದ್ದವು.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X