ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟಲ್ಲಿ ವಿಚಾರಣೆ ; ಭಿನ್ನ ಶಾಸಕರಲ್ಲಿ ತಳಮಳ

By Prasad
|
Google Oneindia Kannada News

Justice VG Sabhahit
ಬೆಂಗಳೂರು, ಅ. 20 : ಶಾಸಕರ ಅನರ್ಹತೆ ಕುರಿತ ವಿಚಾರಣೆ ಹೈಕೋರ್ಟಿನಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಮಧ್ಯಾಹ್ನ 2.30ಕ್ಕೆ ಮುಂದುವರಿದಿದೆ. ನ್ಯಾಯಮೂರ್ತಿ ವಿಜೆ ಸಭಾಹಿತ್ ಅವರು, ಭಿನ್ನಮತೀಯ ಶಾಸಕರು ತಾವಾಗಿಯೇ ಬಿಜೆಪಿಯಿಂದ ಹೊರನಡೆದರೆ ಎಂಬ ಏಕೈಕ ವಿಷಯ ಕುರಿತು ತೀರ್ಪು ನೀಡಬೇಕಾಗಿದೆ.

ಶಾಸಕರನ್ನು ಅನರ್ಹಗೊಳಿಸಿ ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರ ನಿರ್ಣಯ ನಿಯಮ ಮೀರಿಲ್ಲ, ದುರುದ್ದೇಶದಿಂದ ಕೂಡಿಲ್ಲ ಮತ್ತು ಸ್ವಾಭಾವಿಕ ನ್ಯಾಯ ಉಲ್ಲಂಘನೆ ಮಾಡಿಲ್ಲ ಎಂಬ ನಿರ್ಣಯಕ್ಕೆ ಮುಖ್ಯ ನ್ಯಾ.ಖೇಹರ್ ಮತ್ತು ನ್ಯಾ. ಕುಮಾರ್ ಅವರಿದ್ದ ಪೀಠ ತೀರ್ಪು ನೀಡಿತ್ತು.

ಸರಕಾರದ ಪರ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ಮತ್ತು ಅನರ್ಹಗೊಂಡ ಶಾಸಕರ ಪರ ಕೆಜಿ ರಾಘವನ್ ಮತ್ತು ಆಚಾರ್ಯ ವಾದ ಮಂಡಿಸಲಿದ್ದಾರೆ. ಇಂದು ಮಧ್ಯಾಹ್ನದ ಮೇಲೆ ವಿಚಾರಣೆ ಆರಂಭವಾಗುತ್ತಿರುವುದರಿಂದ ಇಂದೇ ತೀರ್ಪು ಬರುವುದು ಅನುಮಾನ.

ಭಿನ್ನಮತೀಯರಲ್ಲಿ ತಳಮಳ : ಕರ್ನಾಟಕ ಹೈಕೋರ್ಟಿನಲ್ಲಿ ಬಿಜೆಪಿ ಶಾಸಕರ ಅನರ್ಹತೆ ಕುರಿತ ವಿಚಾರಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಬಳಿಯ ಗೋಲ್ಡನ್ ಪಾಮ್ ರೆಸಾರ್ಟಲ್ಲಿ ಕಾಲಹರಣ ಮಾಡುತ್ತಿರುವ ಭಿನ್ನಮತೀಯರ ಪಾಳಯದಲ್ಲಿ ತಣ್ಣನೆ ನಡುಕ ಶುರುವಾಗಿದೆ.

ಹೈಕೋರ್ಟಿನ ತೀರ್ಪು ಏನೇ ಆಗಲಿ, ಮುಂದೆ ಏನು ಮಾಡಬೇಕು, ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳಬೇಕು, ಯಾವ ಪಕ್ಷ ಸೇರಬೇಕು ಎಂಬ ಕುರಿತು ತೀವ್ರ ಗೊಂದಲ ಕಾಣುತ್ತಿದೆ. ರಾಜಕೀಯ ಭವಿಷ್ಯ ಆತಂಕದಲ್ಲಿದೆ ಎಂಬ ಕುರುಹು ಅವರಲ್ಲಿ ಎದ್ದು ಕಾಣುತ್ತಿದೆ.

ಜೊತೆಗೆ ಬಿಜೆಪಿ ಪಕ್ಷ ಆಪರೇಷನ್ ಕಮಲಕ್ಕೆ ಕೈಹಾಕಿರುವುದು ಅವರನ್ನು ಮತ್ತಷ್ಟು ಆತಂಕದ ಮಡುವಿಗೆ ತಳ್ಳಿದೆ. ಆಪರೇಷನ್ ಕಮಲ ಶುರುಮಾಡಿದ್ದಕ್ಕೆ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು ಯಡಿಯೂರಪ್ಪ ಸರಕಾರ ಬೀಳಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿಯಲೇಬೇಕು ಎಂಬುದು ಅವರ ನಿಲುವಾಗಿದೆ.

ಅನರ್ಹಗೊಂಡ ಶಾಸಕರು : ಅರಭಾವಿ-ಬಾಲಚಂದ್ರ ಜಾರಕಿಹೊಳಿ, ಕಾಗವಾಡ-ಭರಮ ಗೌಡ ಕಾಗೆ, ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ, ಇಂಡಿ-ಡಾ.ಸಾರ್ವಭೌಮ ಬಗಲಿ, ಕಾರವಾರ-ಆನಂದ್ ವಸಂತ ಅಸ್ನೋಟಿಕರ್, ದೇವದುರ್ಗ- ಕೆ.ಶಿವನ ಗೌಡ ನಾಯಕ್, ಸಾಗರ- ಗೋಪಾಲಕೃಷ್ಣ ಬೇಳೂರು, ಕೆಜಿಎಫ್-ವೈ.ಸಂಪಂಗಿ, ನೆಲಮಂಗಲ-ಎಂ.ವಿ.ನಾಗರಾಜು, ಚಾಮರಾಜನಗರ -ಎಚ್.ಎಸ್. ಶಂಕರಲಿಂಗೇಗೌಡ, ಕೊಳ್ಳೇಗಾಲ-ಜಿ. ಎನ್.ನಂಜುಂಡಸ್ವಾಮಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X