ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆ ವಿರುದ್ಧ ಪ್ರತಿಭಟನೆಗೆ ಮುಂದಾದ ಅಗ್ನಿ ಶ್ರೀಧರ್

By Mahesh
|
Google Oneindia Kannada News

Agni Sridhar
ಬೆಂಗಳೂರು, ಅ.20: ರಾಜ್ಯ ರಾಜಕೀಯ ವ್ಯವಸ್ಥೆ ಹದಗೆಟ್ಟಿರುವ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಲ್ಲದೆ, ಸಿಎಂ ಯಡಿಯೂರಪ್ಪ ಅವರೊಡನೆ ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದ ಬಗ್ಗೆ ಸಂಸದ ಹೆಚ್.ವಿಶ್ವನಾಥ್ ಪ್ರಶ್ನಿಸಿದ ನಂತರ, ಈಗ ಪ್ರಗತಿಪರ ಒಕ್ಕೂಟ ಕೂಡಾ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಮಹತ್ವದ ತೀರ್ಪು ಕೊಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸಿಎಂ ಜೊತೆ ಕಾಲಕಳೆದ ನಂತರ ಜೆ.ಎ ಸ್ ಖೆಹರ್ ಅವರು ಸ್ಪೀಕರ್ ಕ್ರಮವನ್ನು ಎತ್ತಿಹಿಡಿದು, ಸರ್ಕಾರದ ಪರ ನಿಂತಿದ್ದು ಅನುಮಾನಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳಲ್ಲಿ ಪ್ರಮುಖವಾದ ನ್ಯಾಯಾಂಗವೇ ಊನವಾದರೆ ಏನು ಮಾಡುವುದು ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸ್ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿ ಮುಖ್ಯನ್ಯಾಯಮೂರ್ತಿಗಳು ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ. ನ್ಯಾಯಾಂಗ ಮುಖ್ಯಸ್ಥರೊಬ್ಬರು ದೇಶದ ಇತಿಹಾಸದಲ್ಲಿ ಎಂದಿಗೂ ಈ ರೀತಿ ನಡೆದುಕೊಂಡಿಲ್ಲ. ಈ ಸಂಬಂಧ ಶನಿವಾರ ಎಂಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಅಲ್ಲದೆ, ಬಂಜಗೆರೆ ಜಯಪ್ರಕಾಶ್, ಇಂಧೂಧರ ಹೊನ್ನಾಪುರ ಮತ್ತಿತ್ತರು ಹಾಜರಿದ್ದರು. ಸದ್ಯ ಶಾಸಕರ ಅನಹರ್ತೆ ವಿಚಾರಣೆಯನ್ನು ನ್ಯಾ.ವಿ.ಜೆ. ಸಭಾಹಿತ್ ಅವರು ನಡೆಸುತ್ತಿದ್ದಾರೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X