ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಿಂದ ಇಳಿದ ತಕ್ಷಣ ಮೊಬೈಲ್ ಆನ್

By Mahesh
|
Google Oneindia Kannada News

Minister Praful Patel
ನವದೆಹಲಿ, ಅ.19: ವಿಮಾನ ಭೂ ಸ್ಪರ್ಶ ಮಾಡಿದ ಕೂಡಲೇ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವುದಕ್ಕೆ ನಾಗರೀಕ ವಿಮಾನಯಾನ ನಿರ್ದೇಶನಾಲಯ(DGCA) ಅವಕಾಶ ಕಲ್ಪಿಸಿದೆ. ಈ ನಿಯಮ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಅನ್ವಯವಾಗಲಿದ್ದು, ಅ.22 ರೊಳಗೆ ಈ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಪ್ರಯಾಣಿಕರು ವಿಮಾನದಿಂದ ಇಳಿದೊಡನೆ ತಮ್ಮ ಆಪ್ತರೊಡನೆ ಮಾತನಾಡಬಹುದು.

ವಿಮಾನ ಭೂ ಸ್ಪರ್ಶ ಮಾಡಿದ ಬಳಿಕ ಮೊಬೈಲ್ ಬಳಕೆ ಮಾಡುವಂತೆ ಪ್ರಯಾಣಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಮೊಬೈಲ್ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಹವಾಮಾನ ವೈಪರೀತ್ಯಗಳಿರುವಾಗ ಈ ನಿಯಮಗಳು ಅನ್ವಯವಾಗುವುದಿಲ್ಲ.

ಈ ಮೊದಲು ವಿಮಾನ ಭೂ ಸ್ಪರ್ಶವಾದ ಬಳಿಕ ವಿಮಾನದ ಬಾಗಿಲುಗಳು ತೆರೆದು, ಪೈಲಟ್‌ನಿಂದ ಆದೇಶ ಬಂದ ನಂತರ ಸಿಬ್ಬಂದಿಗಳು ಹೇಳಿದ ಬಳಿಕ ಮೊಬೈಲ್ ಬಳಸಬೇಕಾಗಿತ್ತು. ಈ ಹೊಸ ನಿಯಮ ಅಕ್ಟೋಬರ್ 22ರಿಂದ ಜಾರಿಗೆ ಬರಲಿದೆ. ಕಳೆದ ತಿಂಗಳು ವಿಮಾನಯಾನ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X