ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಯನ್ನು ಹೊಡೆದರೆ ತಪ್ಪಲ್ಲ : ಯುಎಇ ಕೋರ್ಟ್

By Prasad
|
Google Oneindia Kannada News

It is OK to beat wife : UAE court
ಅಬುಧಾಬಿ (ಯುಎಇ), ಅ. 19 : ದಾರಿಬಿಟ್ಟ ಹೆಂಡತಿಯನ್ನು ಸರಿದಾರಿಗೆ ಸರುವುದು ಗಂಡನ ಕರ್ತವ್ಯ. ಇದಕ್ಕಾಗಿ ಆಕೆ ಗಂಡನಿಂದ ಶಿಕ್ಷೆಗೆ ಗುರಿಯಾದರೂ ಸರಿ. ಆದರೆ, ಮೈಮೇಲೆ ಯಾವುದೇ ಗಾಯದ ಗುರುತಿರಬಾರದು.

ಈ ಕಾನೂನನ್ನು ನಾಡಿನ ಅತ್ಯುನ್ನತ ನ್ಯಾಯಾಲಯವೇ ಎತ್ತಿಹಿಡಿದಿದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್ ನ ಸರ್ವೋಚ್ಚ ನ್ಯಾಯಾಲಯ ನ್ಯಾಯವನ್ನು ಎತ್ತಿಹಿಡಿದಿರುವ ಬಗೆ.

ಪ್ರಕರಣವೊಂದರಲ್ಲಿ ಗಂಡ ಹೆಂಡತಿ ಮತ್ತು ವಯಸ್ಸಿಗೆ ಬಂದ ಮಗಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದ. ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಆತನನ್ನು ನ್ಯಾಯಾಲಯ ದೋಷಿಯನ್ನಾಗಿ ಮಾಡಿದೆ. ನ್ಯಾಯದಾನ ಮಾಡಿದವರು ಮುಖ್ಯ ನ್ಯಾಯಮೂರ್ತಿ ಫಲಾಹ್ ಅಲ್ ಹಜೇರಿ.

ನ್ಯಾಯದಾನ ಮಾಡುವಾಗ ನ್ಯಾಯಾಲಯ ಗಮನಿಸಿರುವ ಸಂಗತಿಗಳು ಹೀಗಿವೆ : ಗಂಡನಿಗೆ ಹೆಂಡತಿಯ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ದೇಹದ ಮೇಲೆ ಶಿಕ್ಷೆಗೆ ಒಳಪಡಿಸಿದ ಯಾವುದೇ ಗುರುತಿರಬಾರದು. ಹಾಗೆಯೇ, ವಯಸ್ಸಿಗೆ ಬಂದ ಮಗಳ ಕೈ ಮಾಡಲು ಅಪ್ಪನಿಗೆ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಮಗಳ ವಯಸ್ಸು 23.

ಇದು ಅರಬ್ ನೆಲದ ನ್ಯಾಯವೇ ಆಗಿರಬಹುದು. ಆದರೆ, ಹೆಂಡತಿಯ ಮೇಲೆ ದಬ್ಬಾಳಿಕೆ ಮಾಡುವುದು, ದೈಹಿಕ ಹಲ್ಲೆ ಮಾಡಲು ಅವಕಾಶ ನೀಡುವುದು ಎಷ್ಟು ಸರಿ? ನ್ಯಾಯಾಲಯವೇ ಇದಕ್ಕೆ ಅವಕಾಶ ಕೊಟ್ಟರೆ ಅಮಾಯಕ ಮಹಿಳೆಯರ ಗತಿ ಏನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X