ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯಾನಾ' ಸಾವಯವ ವೈನ್ ಮಾರುಕಟ್ಟೆಗೆ

By Mahesh
|
Google Oneindia Kannada News

Yaana Wine
ಬೆಂಗಳೂರು, ಅ.19: ಖ್ಯಾತ ವೈನ್ ತಯಾರಿಕಾ ಕಂಪೆನಿ ಇಂಡಿಯನ್ ಆಂಬಿಯನ್ಸ್ ವೈನ್‌ಯಾರ್ಡ್ ಪ್ರೈ.ಲಿ. (ಐಎವಿಪಿಎಲ್) 'ಯಾನಾ' ಎಂಬ ಹೆಸರಿನಲ್ಲಿ ಪ್ರಮುಖ ವೈನ್ ಬ್ರ್ಯಾಂಡ್ ಅನ್ನು ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ದೆಹಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೀದರ್ ಜಿಲ್ಲೆಯ ತಡೋಲಾದಲ್ಲಿನ 60 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿಯಿಂದ ಇದನ್ನು ತಯಾರಿಸಲಾಗಿದೆ.ಕಂಪೆನಿಯ ಹೆಸರೇ ಹೇಳುವಂತೆ ಭಾರತೀಯ ಗ್ರಾಹಕರು ಮತ್ತು ವಾತಾವರಣಕ್ಕೆ ಪೂರಕವಾಗಿ ವೈನ್ ತಯಾರಿಸುವುದು ಕಂಪೆನಿಯ ಧ್ಯೇಯ.

ಅದಕ್ಕೆ ತಕ್ಕಂತೆ ಸಾವಯವ ರೀತಿಯಲ್ಲಿ ದ್ರಾಕ್ಷಿಯನ್ನು ಬೆಳೆಯುವುದರಿಂದ ಹಿಡಿದು ಅತ್ಯುತ್ತಮ ಗುಣಮಟ್ಟದ ವೈನ್ ತಯಾರಿಕೆ ತನಕ ಬಹಳ ಮುತುವರ್ಜಿ ವಹಿಸಿ ಈ ಸಾವಯವ 'ಯಾನಾ' ವೈನ್ ತಯಾರಾಗಿದೆ. ಒಟ್ಟು ಏಳು ಫ್ರೆಂಚ್ ವೈವಿಧ್ಯಗಳಲ್ಲಿ ವೈನ್ ಮಾರುಕಟ್ಟೆಗೆ ಬಂದಿದೆ. 5 ರೆಡ್ ವೈನ್ ವೈವಿಧ್ಯಗಳಲ್ಲಿ ಶೆರಾಜ್ ಮೆರ್ಲಟ್, ಕಬೆರ್ನೆಟ್ ಶಿರಾಜ್, ಶಿರಾಜ್, ಕಬೆರ್ನೆಟ್ ಸೌವಿಂಗ್ನನ್ ಮತ್ತು ರೋಸ್‌ಗಳ್ದಿದರೆ, 2 ವೈಟ್ ವೈನ್ ವೈವಿಧ್ಯಗಳಲ್ಲಿ ಚೆನಿನ್ ಬ್ಲ್ಯಾಂಕ್ ಮತ್ತು ಸೌವಿಂಗ್ನನ್ ಬ್ಲ್ಯಾಂಕ್‌ಗಳು ಸೇರಿವೆ.

ಭಾರತೀಯರಿಗೆ ಸದಾ ನೆನಪಲ್ಲಿ ಉಳಿಯುವಂತಹ ಮತ್ತು ಅವರು ಇಷ್ಟಪಡುವ ಸ್ವಾದದ ವೈನ್ ತಯಾರಿಸುವುದು ಕಂಪೆನಿಯ ಉದ್ದೇಶ. ಮಾರುಕಟ್ಟೆಗೆ ಶೀಘ್ರವೇ ಇನ್ನಷ್ಟು ವೈವಿಧ್ಯದ ವೈನ್‌ಗಳು ಕಂಪೆನಿಯಿಂದ ತಯಾರಾಗಿ ಬರಲಿದೆ ಎನ್ನುತ್ತಾರೆ ಐಎವಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಾಲಿನಿ ವಾಡಿಕರ್.

ನಗರದಲ್ಲಿ ಇತ್ತೀಚೆಗೆ ನಡೆದ ಯಾನಾ ಸಾವಯವ ವೈನ್ ಬಿಡುಗಡೆ ಸಮಾರಂಭದಲ್ಲಿ ಕೇಶವಪ್ಪ ಬಿರಾದಾರ್,ಜಾನ್ ಪಿರೇರಾ, ರವೀಂದ್ರನ್, ರಾಜ್ಯ ವೈನ್ ಬೋರ್ಡ್ ಅಧ್ಯಕ್ಷ ಸುರೇಶ್ಚಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X