ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಥೋದ್ಭವಕ್ಕೆ ಸಜ್ಜುಗೊಂಡ ತಲಕಾವೇರಿ

By Mahesh
|
Google Oneindia Kannada News

Talakaveri Thirthodbhava festival
ಬೆಂಗಳೂರು, ಅ.17: ನವರಾತ್ರಿ ಹಬ್ಬದ ಬೆನ್ನಲ್ಲೇ ಕಾವೇರಿ ನದಿ ತೀರ್ಥೋದ್ಭವ ಸಂಭವಿಸುತ್ತಿರುವುದು ಭಕ್ತಾದಿಗಳ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ. ಮೈಸೂರು ದಸರಾದ ಜಂಬೂ ಸವಾರಿ ಕಂಡು ಪುನೀತರಾದ ಪ್ರವಾಸಿಗರು, ಕೊಡಗಿಗೆ ಆಗಮಿಸಿ, ಕಾವೇರಿ ತಾಯಿಯ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ನಾಳೆ ಬೆಳಗ್ಗೆ ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಆಗಲಿದೆ. ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಘಳಿಗೆಯಲ್ಲಿ(ತುಲಾ ಸಂಕ್ರಮಣ ಕಾಲ) ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗುತ್ತದೆ.

ಸ್ಪೀಕರ್ ಬೋಪಯ್ಯ ಗೈರು: ಕಾವೇರಿ ತೀರ್ಥೋದ್ಭವ, ಮಡಿಕೇರಿ, ಗೋಣಿಕೊಪ್ಪಲು ದಸರೆಗೆ ಆಗಮಿಸಿ ಸಂಭ್ರಮಪಡುತ್ತಿದ್ದ ಸಭಾಪತಿ ಕೆಜಿ ಬೋಪಯ್ಯ ಅವರು ಈ ಬಾರಿ ಗೈರು ಹಾಜರಾಗಲಿದ್ದಾರೆ. ಬೆಂಗಳೂರು ನಗರದಿಂದ ಕೆಲ ದಿನಗಳ ಹೊರ ಹೋಗದಂತೆ ಗುಪ್ತಚರ ಇಲಾಖೆ ನೀಡಿದ ಸೂಚನೆ ಮೇರೆಗೆ ಬೋಪಾಯ್ಯ ಅವರು ಈ ಬಾರಿ ಮಡಿಕೇರಿಗೆ ಹೋಗದಿರಲು ನಿರ್ಧರಿಸಿದ್ದಾರೆ. ಆದರೆ, ಕಾವೇರಿ ತೀರ್ಥೋದ್ಭವ ಮಹೂರ್ತಕ್ಕೂ ಒಂದು ವಾರದ ಮುಂಚೆ ತಲಕಾವೇರಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದ ಬೋಪಾಯ್ಯ ಅವರು ತಾಯಿ ಕಾವೇರಿಗೆ ಭಕ್ತಿಯಿಂದ ನಮಿಸಿ, ಪೂಜೆ ಸಲ್ಲಿಸಿದ್ದರು.

ತೆರಿಗೆ ವಿನಾಯಿತಿ: ಕಾವೇರಿ ತೀರ್ಥೋದ್ಭವ ಶುಭ ಸಂದರ್ಭವನ್ನು ವೀಕ್ಷಿಸಲು ಪರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿ ರಾಜ್ಯ ಸರ್ಕಾರ ರಸ್ತೆ ತೆರಿಗೆ ವಿನಾಯಿತಿ ನೀಡಿದೆ. ಅಂತಾರಾಜ್ಯ ಪ್ರವಾಸಿ ವಾಹನಗಳಿಗೆ ಈ ವಿನಾಯಿತಿ ಅ.24 ರ ವರೆಗೆ ಅನ್ವಯವಾಗಲಿದೆ ಈ ಮೂಲಕ ಮಡಿಕೇರಿ ದಸರಾ, ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಎಂದು ಸಾರಿಗೆ ಸಚಿವ ಆರ್ .ಅಶೋಕ್ ಅವರು ತಿಳಿಸಿದರು.

ತೀರ್ಥೋದ್ಭವ ಪ್ರೋಕ್ಷಣೆ ಪುಣ್ಯ: ತುಲಾ ಸಂಕ್ರಮಣದಂದು ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ. ತೀರ್ಥೋದ್ಭವಾದ ಗಳಿಗೆಯಲ್ಲಿ ಕಾವೇರಿಯ ನೀರಿನ ಪ್ರೋಕ್ಷಣೆಯಾದರೂ ಸಾಕು ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ತೀರ್ಥೋದ್ಭವ ವೀಕ್ಷಿಸಲು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ.

ನಾಡಹಬ್ದ ದಸರಾ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X